ನವದೆಹಲಿ: ಸ್ನೇಹಿತನ ತಲೆಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಸಂದೀಪ್ ಸಿಂಗ್ ಅಹ್ಲುವಾಲಿಯಾ (52) ಮೃತನಾಗಿದ್ದಾನೆ. 54 ವರ್ಷದ ಮಂಗಲ್ ಸಿಂಗ್ ಜಗಳಕ್ಕಾಗಿ ತನ್ನ ಸ್ನೇಹಿತನನ್ನು ಕೊಂದಿದ್ದಾನೆ. ದೆಹಲಿಯ ವಿಷ್ಣು ಗಾರ್ಡನ್ ಪ್ರದೇಶದಲ್ಲಿ ಸಂದೀಪ್ ವಾಸಿಸುತ್ತಿದ್ದ ಈತ ಸ್ನೇಹಿತನ ಸಿಟ್ಟಿನಿಂದ ಪ್ರಾಣ ಬಿಟ್ಟಿದ್ದಾನೆ.
ಸಂದೀಪ್ ಪತ್ನಿ ಮಂಜಿತ್ ಕೌರ್ ನೀಡಿರುವ ಹೇಳಿಕೆಯಂತೆ, ಪತಿ ಮಂಗಲ್ ಸಿಂಗ್ ಜೊತೆಗೆ ಮನೆಯಿಂದ ಹೊರ ಹೋಗಿದ್ದರು. ಮನೆಗೆ ವಾಪಸ್ ಬಂದಿಲ್ಲ. ಆಗ ನಾನು ಪತಿಯ ಫೋನ್‍ಗೆ ಕರೆ ಮಾಡಿದೆ. ಮಂಗಲ್ ಫೋನ್ ಸ್ವೀಕರಿಸಿ ಸಂದೀಪ್ ಇರುವ ವಿಳಾಸವನ್ನು ತಿಳಿಸಿದರು. ನಾನು ಅಲ್ಲಿ ಹೋಗಿ ನೋಡಿದಾಗ ಪತಿಗೆ ಎಡ ಕಿವಿ, ಮೂಗು ಮತ್ತು ತಲೆಗೆ ಗಾಯಗಳಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ಅವರು ಮೃತಪಟ್ಟಿದ್ದಾರೆ. ಆದರೆ ಅವರು ಸಾಯುವ ಮುನ್ನ ನಡೆದ ಘಟನೆಯನ್ನು ನನ್ನ ಬಳಿ ಹೇಳಿದ್ದಾರೆ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಇದನ್ನೂ ಓದಿ: ಸ್ನೇಹಿತನಿಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದ
ಪತಿ ಸಾವಿನ ನಂತರ ಮಂಜಿತ್ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ದೆಹಲಿ ಪೆÇಲೀಸರು ಮಂಗಲ್‍ನನ್ನು ಪತ್ತೆಹಚ್ಚಿದರು. ಮಂಗಲ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಾವು ಕುಡಿದಿದ್ದೇವು. ನಮ್ಮಿಬ್ಬರ ನಡುವೆ ಕೆಲವು ವಿವಾದಗಳಿವೆ. ಸಂದೀಪ್ ನನ್ನನ್ನು ನಿಂದಿಸಲು ಪ್ರಾರಂಭಿಸಿದ್ದನು. ಇದನ್ನು ತಡೆದುಕೊಳ್ಳಲಾಗದೆ ಆತನ ಮೇಲೆ ಇಕ್ಕಳದಿಂದ ಹಲ್ಲೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ