-7ನೇ ಕೊಲೆ ಮಾಡಲು ಹೋಗಿ ಸಿಕ್ಕಿ ಬಿದ್ದ
ಚಂಡೀಗಢ: ಹರಿಯಾಣ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಎರಡು ಗಂಟೆಯಲ್ಲಿ ಬರೋಬ್ಬರಿ 6 ಕೊಲೆಗಳನ್ನು ಮಾಡಿರುವ ಶಾಕಿಂಗ್ ಘಟನೆಯೊಂದು ನಡೆದಿದೆ. ಇಂದು ಬೆಳಗಿನ ಜಾವ ಈ ಆರು ಕೊಲೆಗಳು ನಡೆದಿರುವುದು ವಿಶೇಷ.
ಇಂದು ಬೆಳಗಿನ ಜಾವ 2 ರಿಂದ 4 ಗಂಟೆಯಲ್ಲಿ ಪಲ್ವಾನ್ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಕಬ್ಬಿಣದ ರಾಡ್ ಬಳಸಿ ವ್ಯಕ್ತಿಯೊಬ್ಬ 6 ಕೊಲೆಗಳನ್ನು ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ 7ನೇ ಸಲ ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಲೆ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.
Advertisement
ಯಾರು ಆ ಹಂತಕ?: ಅಂದಾಜು 40 ರಿಂದ 45 ವಯಸ್ಸಿನ ನರೇಶ್ ಎಂಬಾತನೇ 6 ಕೊಲೆಗೈದ ಆರೋಪಿ. ನರೇಶ್ ಮಾಜಿ ಸೈನಿಕ ಎಂಬುದು ಆತನ ಬಳಿಯಿದ್ದ ಐಡಿ ಕಾರ್ಡ್ ನಿಂದ ತಿಳಿದು ಬಂದಿದೆ. ಸದ್ಯ ಆರೋಪಿ ನರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ನರೇಶ್ ಒಬ್ಬ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದ್ದು, ಬಂಧನದ ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರೇಶ್ ಕೊಲೆ ಮಾಡಲು ಕಬ್ಬಿಣದ ರಾಡ್ ಬಳಸಿದ್ದು, ಪಲ್ವಾನ್ ನಗರದ ಬೀದಿಗಳಲ್ಲಿ ನಡೆಯುತ್ತಿದ್ದವರನ್ನು ಕೊಲೆ ಮಾಡುತ್ತಾ ಮುಂದೆ ಹೋಗಿದ್ದಾನೆ ಅಂತಾ ಪಲ್ವಾನ್ ನಗರ ಠಾಣೆಯ ಎಸ್‍ಪಿ ಸಲೋಚನಾ ಗಜರಾಜ್ ತಿಳಿಸಿದ್ದಾರೆ.
Advertisement
ಕೊಲೆಗಳು ನಡೆದಿದ್ದು ಹೇಗೆ?: ಈ ಆರು ಕೊಲೆಗಳು ನಗರದ ಬೇರೆ ಬೇರೆ ಬೀದಿಗಳಲ್ಲಿ ನಡೆದಿವೆ. ಬೆಳಗಿನ ಜಾವ ಸುಮಾರು 2.30ಕ್ಕೆ ಪಲ್ವಾನ್ ಆಸ್ಪತ್ರೆಯಲ್ಲಿ ಅಂಜುಮ್ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಅಂಜುಮ್ ಮೃತ ದೇಹವನ್ನು ವಾಶ್ ರೂಮಿನಲ್ಲಿ ಬಚ್ಚಿಟ್ಟು, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೈ ಯಲ್ಲಿ ಕಬ್ಬಿಣದ ರಾಡ್ ಹಿಡಿದು ಹೊರ ಬಂದವನೇ ಒಟ್ಟು 4 ಕೊಲೆಗಳನ್ನು ಮಾಡಿದ್ದಾನೆ. ಪಲ್ವಾನ್ ನಗರದ ಆಗ್ರಾ ರೋಡ್ ಮತ್ತು ಮಿನಾರ್ ಗೇಟ್ ಬೀದಿಯಲ್ಲಿ ನಾಲ್ಕು ಜನರನ್ನು ಕೊಂದಿದ್ದಾನೆ. ನಗರದ ಮಾರುಕಟ್ಟೆ ಬಳಿಕ ಎಂಜಿನಿಯರಿಂಗ್ ವರ್ಕ್ ಶಾಪ್ ನ ವಾಚ್ ಮ್ಯಾನ್ ಕೊನೆಯದಾಗಿ ಕೊಲೆಯಾಗಿದ್ದಾನೆ.
6 ಕೊಲೆ ಮಾಡಿ ಆದರ್ಶ ಕಾಲೋನಿಯಲ್ಲಿ ಹೋಗುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಎದುರಾಗಿದ್ದು, ಅವರನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ತಮ್ಮ ಚಾಣಾಕ್ಷತೆಯಿಂದ ನರೇಶ್‍ನನ್ನು ಬಂಧಿಸಿದ್ದಾರೆ.
ನರೇಶ್‍ನನ್ನು ಬಂಧಿಸಿದ ನಂತರ ಆತನನ್ನು ಪಲ್ವಾನ್ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ವೈದ್ಯರ ಸಲಹೆ ಮೇರೆಗೆ ಫರೀದಾಬಾದ್ ನ ಆಸ್ಪತ್ರೆಗೆ ನರೇಶ್ ನನ್ನು ರವಾನಿಸಲಾಗಿದೆ.
https://www.youtube.com/watch?v=xE_HlevalBQ