ನವದೆಹಲಿ: ವಿವಾಹಿತ ಮಹಿಳೆ ಎರಡನೇ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಮಗಳ ಮುಂದೆ ಆಕೆಯನ್ನು ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ದೆಹಲಿಯ ನಂಗ್ಲೋಲಿಯಲ್ಲಿ ನಡೆದಿದೆ.
45 ವರ್ಷದ ಮಾಧುರಿ ಮೃತ ದುರ್ದೈವಿ. ಆರೋಪಿಯನ್ನು ಶ್ಯಾಮ್ ಯಾದವ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ಮಧುಬಾನಿ ಜಿಲ್ಲೆಯ ಪನ್ಸಲ್ವದ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮೃತ ಮಾಧುರಿ ಮತ್ತು ಆರೋಪಿ ಯಾದವ್ ಇಬ್ಬರೂ ಶೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ದಿನಕಳೆದಂತೆ ಆರೋಪಿ ಯಾದವ್ ಮಾಧುರಿಯನ್ನು ಪ್ರೀತಿಸುತ್ತಿದ್ದನು. ಒಂದು ದಿನ ಮಾಧುರಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿದ್ದಾನೆ. ಆದರೆ ಮಾಧುರಿ ಈಗಾಗಲೇ ಮದುವೆಯಾಗಿದ್ದ ಕಾರಣ ನಿರಾಕರಿಸಿದ್ದಾರೆ. ಆರೋಪಿ ಮಾತ್ರ ಮಾಧುರಿಯನ್ನು ಬಿಡದೆ ಹಿಂಬಾಲಿಸುತ್ತಿದ್ದನು. ಇದರಿಂದ ಮಾಧುರಿ ಕೆಲಸವನ್ನು ಬಿಟ್ಟಿದ್ದರು. ಆದರೂ ಯಾದವ್ ಆಕೆಯನ್ನು ಹಿಂಬಾಲಿಸಿ ಕೊನೆಗೆ ಬುಧವಾರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ಬಗ್ಗೆ ನಂಗ್ಲೋಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಮಹಿಳೆಯ ಮಗಳು ನನ್ನ ಮುಂದೆಯೇ ಆರೋಪಿ ಯಾದವ್ ಬಂದು ಅಮ್ಮನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಬಳಿಕ ಮಗಳ ಹೇಳಿಕೆ ಆಧರಿಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಡಿಸಿಪಿ ಸೆಜು ಕುರುವಿಲ್ಲಾ ಹೇಳಿದ್ದಾರೆ.
Advertisement
ಆರೋಪಿ ಕೊಲೆ ಮಾಡಿದ ಬಳಿಕ ನ್ಯಾಂಗ್ಲೋಲಿಯಲ್ಲಿರುವ ಶಿವ ಬಕ್ಸ್ ಪಾರ್ಕ್ ನಲ್ಲಿ ಇದ್ದನು. ಈ ಬಗ್ಗೆ ಪತ್ತೆ ಮಾಡಿದ ಪೊಲೀಸರು ಅಲ್ಲಿಗೆ ಹೋಗಿ ಬಂಧಿಸಿದ್ದಾರೆ. ಬಳಿಕ ಅಪರಾಧಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಹಿಳೆಯನ್ನು ಕೊಂದ ನಂತರ ದೆಹಲಿಯನ್ನು ಬಿಡಲು ಪ್ಲ್ಯಾನ್ ಮಾಡಿದ್ದನು ಎಂದು ಅಧಿಕಾರಿ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv