ಅಕ್ರಮ ಸಂಬಂಧಕ್ಕೆ ಮಕ್ಕಳ ಮುಂದೆಯೇ ಹೆಂಡತಿಯನ್ನು ಕೊಂದ ಕಿರಾತಕ

Public TV
2 Min Read
mandya murder

ಮಂಡ್ಯ: ಆ ಕುಟುಂಬದಲ್ಲಿ ಗಂಡ-ಹೆಂಡತಿ, ಅವರಿಬ್ಬರಿಗೆ ಆರತಿಗೊಂದು ಕೀರ್ತಿಗೊಂದು ಎಂಬಂತೆ ಇಬ್ಬರು ಮಕ್ಕಳಿದ್ರು. ಆದರೆ ಆತನಿಗೆ ಪರಸ್ತ್ರೀಯರೆಂದರೆ ಹುಚ್ಚು. ಪರಸ್ತ್ರೀಯರ ಆಸೆಗಾಗಿ ಪಾಪಿ ಗಂಡ ತನ್ನ ಇಬ್ಬರು ಮಕ್ಕಳ ಎದುರೇ ಕಟ್ಟಿಕೊಂಡವಳನ್ನು ಕೊಲೆಗೈದಿದ್ದಾನೆ. ಪಾಪಿ ತಂದೆಯ ಈ ಕ್ರೌರ್ಯ ನೋಡಿದ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ.

ಪತಿಯ ಕೈಯಿಂದಲೇ ಹತ್ಯೆಯಾದ ಮಹಿಳೆ ಯೋಗಿತಾ. ಈಕೆಯನ್ನು 9 ವರ್ಷಗಳ ಹಿಂದೆ ಕೆಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಿಂದ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದ ರವಿ ಗೌಡನೊಂದಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. 2-3 ವರ್ಷ ರವಿ ಗೌಡ ಹಾಗೂ ಯೋಗಿತಾ ಸಂಸಾರ ಚೆನ್ನಾಗಿಯೇ ಇತ್ತು. ಇದರ ಪ್ರತಿಫಲವಾಗಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಯೋಗಿತಾ ಜನ್ಮ ನೀಡಿದ್ದಳು.

mandya murder 1

ಮದುವೆಯಾದ ಕೆಲವೇ ವರ್ಷಗಳಲ್ಲಿ ರವಿ ಗೌಡ ತನ್ನ ಹಳೆಯ ವರಸೆ, ಎಂದರೆ ಅಕ್ರಮ ಸಂಬಂಧವನ್ನು ಮುಂದುವರಿಸುತ್ತಾನೆ. ಪಕ್ಕದ ಗ್ರಾಮದ ಮಹಿಳೆಯ ಜೊತೆ ರವಿ ಗೌಡ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ಈ ವಿಚಾರ ಗೊತ್ತಾದ ಬಳಿಕ ಯೋಗಿತಾ ರವಿ ಗೌಡನನ್ನು ಪ್ರಶ್ನೆ ಮಾಡಿದ್ದಾಳೆ. ಇದರಿಂದ ಸಂಸಾರದಲ್ಲಿ ಬಿರುಗಾಳಿ ಬೀಸಿದ್ದು, ಪ್ರತಿ ದಿನ ರವಿ ಗೌಡ ಯೋಗಿತಾಗೆ ಬೈಯ್ಯುವುದು, ಹೊಡೆಯುವುದು ಮಾಡುತ್ತಿದ್ದ.

ಇದರ ನಡುವೆಯೇ ಯೋಗಿತಾ ತನ್ನ ಗಂಡ ಪರಸ್ತ್ರೀಯ ಜೊತೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ತಂದೆಯ ಮನೆಯಲ್ಲಿ ತಿಳಿಸಿದ್ದಾಳೆ. ನಂತರ ಅವರಿಬ್ಬರ ನಡುವೆ ರಾಜಿ ಪಂಚಾಯಿತಿ ಎಲ್ಲಾ ಮಾಡಿ ಚೆನ್ನಾಗಿ ಇರಿ ಎಂದು ಹಿರಿಯರು ಹೇಳಿದ್ದರು. ನಂತರವೂ ರವಿ ಗೌಡ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಅಕ್ರಮ ಸಂಬಂಧ ಮುಂದುರೆಸುವುದರ ಜೊತೆಗೆ ಯೋಗಿತಾಗೆ ಟಾರ್ಚರ್ ಮಾಡುತ್ತಿದ್ದ. ಇದನ್ನೂ ಓದಿ: ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ

crime

ಬುಧವಾರ ಸಂಜೆ ರವಿ ಗೌಡ ಮಕ್ಕಳಿಗೆ ತಿನ್ನಲು ಪಾನಿಪುರಿ ನೀಡಿದ್ದ. ಈ ವೇಳೆ ಯೋಗಿತಾ ಮಕ್ಕಳಿಗೆ ತಿನ್ನಬೇಡಿ ಎಂದಿದ್ದಳು. ಇದಕ್ಕೆ ಕೋಪಗೊಂಡ ರವಿ ಗೌಡ ಯೋಗಿತಾಳ ಜಡೆ ಹಿಡಿದು, ಮನೆಯ ಒಳಗಡೆ ಕೆರೆದುಕೊಂಡು ಹೋಗಿದ್ದಾನೆ. ಮನೆಯಲ್ಲಿದ್ದ ವೈರ್ ಅನ್ನು ತೆಗೆದುಕೊಂಡು, ಯೋಗಿತಾಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ತಂದೆಯ ಈ ಕ್ರೌರ್ಯವನ್ನು ಕಂಡ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಕೊಲೆ ಮಾಡಿ ಹೊರಗೆ ಬಂದ ಪಾಪಿ ತಂದೆ ಯಾರಿಗೂ ಹೇಳಬೇಡಿ ನನ್ನನ್ನು ಪೊಲೀಸರು ಅರೆಸ್ಟ್ ಮಾಡಿ ಬಿಡುತ್ತಾರೆ ಎಂದು ಮಕ್ಕಳಿಗೆ ಹೇಳಿ ಪರಾರಿಯಾಗಿದ್ದಾನೆ.

ಇತ್ತ ಮಗಳನ್ನು ಕೊಲೆ ಮಾಡಿರುವ ಅಳಿಯನ ವಿರುದ್ಧ ಹೆತ್ತವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆತ ಒಬ್ಬ ವಿಕೃತ ಕಾಮಿ. ಬಾತ್‌ರೂಂಗೂ ಸಿಸಿ ಟಿವಿ ಹಾಕಿಸಿ, ನಮ್ಮನ್ನೂ ಬೆತ್ತಲೆಯಾಗಿ ನೋಡಿದ್ದಾನೆ. ಅವನಿಗೆ ಹುಡುಗಿಯರ ಶೋಕಿಯಿದೆ. ಈ ವಿಚಾರ ನಮಗೆ ಮದುವೆಯಾದ ಮೇಲೆ ಗೊತ್ತಾಗಿದೆ. ಇವನ ಹೆಣ್ಣುಬಾಕತನದಿಂದ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ. ಅವನನ್ನು ಹಿಡಿದು, ಆಕೆಯನ್ನು ಸಾಯಿಸಿದ ರೀತಿಯಲ್ಲೇ ಸಾಯಿಸಬೇಕು. ನಮ್ಮ ಮಗಳ ಸಾವಿಗೆ ನ್ಯಾಯ ದೊರಕುವವರೆಗೆ ನಾವು ಶವ ಎತ್ತುವುದಿಲ್ಲ ಎಂದು ಹೆತ್ತವರು ಆಕ್ರಂದಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ನುಸುಳಿದ ಪಾಕಿಸ್ತಾನಿ ಮೀನುಗಾರರು- ನಾಲ್ವರ ಬಂಧನ

tumakuru police jeep

ಒಟ್ಟಾರೆ ತನ್ನ ಹೆಣ್ಣುಬಾಕ ಬುದ್ಧಿಯಿಂದ ಹೆಂಡತಿಯನ್ನು ಕೊಲೆ ಮಾಡಿ ಮುದ್ದಾದ ಇಬ್ಬರು ಮಕ್ಕಳನ್ನು ಅನಾಥ ಮಾಡಿದ ಪಾಪಿ ಪತಿ ಪರಾರಿಯಾಗಿದ್ದಾನೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *