ಚಂಡೀಗಢ: ಪತ್ನಿಯನ್ನು ಕೊಂದು ಮೃತದೇಹವನ್ನು ಪೀಸ್ ಪೀಸ್ ಮಾಡಿ ಬೆಡ್ ಕೆಳಗೆ ತುಂಬಿದ್ದ ಆರೋಪಿ ಪತಿ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಘಟನೆ ಜನವರಿ 21 ರಂದು ನಡೆದಿದ್ದು, ಆರೋಪಿ ಪತಿ ರಾಜೇಶ್ ಕುಮಾರ್ ನನ್ನು ಪೊಲೀಸರು ಪಂಜಾಬ್ ನ ಅಮೃತಸರದಲ್ಲಿ ಬಂಧಿಸಿದ್ದಾರೆ. ಆರೋಪಿಯ ಪತ್ನಿ ಬಬಿತಾ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಶಾಹಿದ್ ಅಹ್ಮದ್ ತಿಳಿಸಿದ್ದಾರೆ.
Advertisement
Advertisement
ಮೃತ ಬಬಿತಾ ಪಕ್ಕದ ರೂಮಿನಲ್ಲಿ ಅವರ ಮಾವ ಇದ್ದ ಕಾರಣ ತುಂಬಾ ಮುಜುಗರದಿಂದ ಪತಿಯ ಜೊತೆಗೆ ಸೆಕ್ಸ್ ಗೆ ನಿರಾಕರಣೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಆರೋಪಿ ರಾಜೇಶ್ ಅಂದು ನನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಈ ಬಗ್ಗೆ ಮನೆಯಲ್ಲಿ ವಾದ-ವಿವಾದ ನಡೆಯುತ್ತಿತ್ತು ಎಂದು ಹೇಳಿದ್ದನು. ಆದರೆ ಈಗ ವಿವಾರಣೆ ವೇಳೆ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಜನವರಿ 21ರಂದು ನಡೆದಿದ್ದೇನು?
ಮೃತ ಬಬಿತಾ ಮನೆಯಿಂದ ಕೆಟ್ಟ ವಾಸನೆ ಬಂದ ನಂತರ ಮನೆ ಮಾಲೀಕ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮೃತ ಬಬಿತಾ ತನ್ನ ಪತಿ ರಾಜೇಶ್ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮನೆಯ ಮಾಲೀಕ ದಿನೇಶ್ ಚಹಾ ಅಂಗಡಿ ಇಟ್ಟಿದ್ದು, ಸುಮಾರು ಒಂದೂವರೆ ತಿಂಗಳಿಂದ ಮನೆ ಮಾಲೀಕನ ಕ್ಯಾಬ್ ಚಾಲಕನಾಗಿ ರಾಜೇಶ್ ಕೆಲಸ ಮಾಡುತ್ತಿದ್ದನು.
Advertisement
ರಜೆ ಇದ್ದ ಕಾರಣ ಮಾಲೀಕ ಎರಡು ದಿನಗಳ ಕಾಲ ಮನೆಯಲ್ಲಿ ಇರಲಿಲ್ಲ. ಆರೋಪಿ ರಾಜೇಶ್ ಕ್ಯಾಬ್ ಓಡಿಸಿಕೊಂಡು, ಚಹಾ ಅಂಗಡಿಯನ್ನು ನೋಡಿಕೊಂಡಿದ್ದನು. ಆದರೆ ಮಾಲೀಕ ಹಿಂದಿರುಗಿ ಮನೆಗೆ ಬಂದಾಗ ರಾಜೇಶ್ ಇರಲಿಲ್ಲ. ಜೊತೆಗೆ ಮನೆಯಿಂದ ಎರಡು ದಿನದಿಂದ ತುಂಬಾ ಕೆಟ್ಟ ವಾಸನೆ ಬರುತ್ತಿತ್ತು. ಕೊನೆಗೆ ಜನವರಿ 26 ರಂದು ಮನೆಗೆ ಹೋಗಿ ಹುಡುಕಾಡಿದಾಗ ಬೆಡ್ ಕೆಳಗೆ ತುಂಡು ತುಂಡಾದ ಮಹಿಳೆಯ ದೇಹ ಕಂಡು ಬಂದಿತ್ತು.
ಆರೋಪಿ ರಾಜೇಶ್ ಕೊಲೆ ಮಾಡಿ ಪರಾರಿಯಾಗಿದ್ದನು. ಪೊಲೀಸರು ಈ ಕುರಿತು ತನಿಖೆ ಕೈಗೊಂಡು ಈಗ ಆರೋಪಿಯನ್ನು ಹುಡುಕಾಡಿ ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv