ಮಂಡ್ಯ: ಒಂದು ಇಯರ್ ಫೋನ್, 25 ಗ್ರಾಂ ಬೆಳ್ಳಿ ಖಡ್ಗದ ಆಸೆಗೆ ಶ್ರೀರಂಗಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಗೂಡ್ಸ್ ಆಟೋ ಚಾಲಕನ ಕೊಲೆ ಪ್ರಕರಣವನ್ನು ಮಂಡ್ಯ ಪೊಲೀಸರು ಭೇದಿಸಿದ್ದಾರೆ.
ಸಣ್ಣ ಸುಳಿವು ಸಿಗದಂತೆ ಡಿಸೆಂಬರ್ 6 ರ ಮಧ್ಯರಾತ್ರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಗೂಡ್ಸ್ ಆಟೋ ಚಾಲಕನನ್ನು ಹಂತಕ ಹತ್ಯೆ ಮಾಡಿದ್ದನು. ಆದರೆ ನಿರತರ ತನಿಖೆ ನಡೆಸಿದ ಹಂತಕ ಕೊನೆಗೂ ಖಾಕಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ನಡೆದಿದ್ದೇನು?
ಗೂಡ್ಸ್ ಆಟೋ ಚಾಲಕ ಗಜೇಂದ್ರ(25) ಕೊಲೆಯಾದ ದುರ್ದೈವಿ. ಈತ ಹೊಸಪೇಟೆ ತಾಲೂಕಿನ ಕುಂಬಾರಹಳ್ಳಿಯ ಗ್ರಾಮದವನು. ಹೊಸಪೇಟೆಯಿಂದ ಮೈಸೂರಿಗೆ ತರಕಾರಿಯನ್ನು ಗಜೇಂದ್ರ ಸಾಗಿಸುತ್ತಿದ್ದನು. ಅಂದು ಮೈಸೂರಿಗೆ ತೆರಳುವಾಗ ನಿದ್ದೆ ಬಂದ ಕಾರಣ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಬಳಿ ಗೂಡ್ಸ್ ವಾಹನ ನಿಲ್ಲಿಸಿ ನಿದ್ರೆ ಮಾಡುತ್ತಿರುತ್ತಾನೆ. ಇದನ್ನೂ ಓದಿ: ಬಾಲಕನ ಕಣ್ಣಿಗೆ ಮೊಳೆ ಹೊಡೆದು ವಿಚಿತ್ರವಾಗಿ ಸಾಯಿಸಿದ ಕ್ರೂರಿಗಳು!
ಈ ವೇಳೆ ಸೈಯದ್ ರಫೀಕ್ ಆಟೋ ಗಾಜು ಹೊಡೆದು ಗಂಜೇಂದ್ರನನ್ನು ಮಚ್ಚಿನಿಂದ ಕೊಚ್ಟಿ ಕೊಲೆ ಮಾಡಿದ್ದಾನೆ. ನಂತರ ಗಜೇಂದ್ರನ ಮೈ ಮೇಲೆ ಇದ್ದ 25 ಗ್ರಾಂ ಬೆಳ್ಳಿ ಖಡ್ಗ ಹಾಗೂ 200 ರೂ. ಮೌಲ್ಯದ ಹೆಡ್ ಫೋನ್ ದೋಚಿ ಪರಾರಿಯಾಗಿದ್ದಾನೆ. ಹೆದ್ದಾರಿ ಬದಿಯಲ್ಲಿ ನಡೆದಿದ್ದ ಕೊಲೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ಸಣ್ಣ ಸುಳಿವನ್ನು ಆರೋಪಿ ಬಿಟ್ಟಿರಲಿಲ್ಲ. ಈ ಹಿನ್ನೆಲೆ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸವಾಲಾಗಿತ್ತು.
ಹಂತಕನಿಗಾಗಿ ಶೋಧ!
ಕೃತ್ಯ ನಡಿದಿದ್ದ ಸ್ಥಳದಿಂದ ಸುಮಾರು 1 ಕಿ.ಮೀ ದೂರದಲ್ಲಿದ್ದ ಸಿಸಿಟಿವಿ ದೃಶ್ಯ ಆಧರಿಸಿ ಹಂತಕನಿಗಾಗಿ ಪೊಲೀಸರು ಶೋಧ ನಡೆಸುತ್ತಾರೆ. ಕೊಲೆಯಾದ ರಾತ್ರಿ ಆದೇ ಸಮಯದಲ್ಲಿ ಬಾಬುರಾಯನಕೊಪ್ಪಲು ಗ್ರಾಮ ರಸ್ತೆಯಲ್ಲಿ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಕಾಣುತ್ತದೆ. ಅನುಮಾನಗೊಂಡ ಪೊಲೀಸರು ಆತ ಯಾರು ಎಂದು ಪತ್ತೆ ಮಾಡಲು ಮುಂದಾಗುತ್ತಾರೆ.
ಶೋಧನೆ ಮಾಡಿದ ಬಳಿಕ ಆತ ಸೈಯ್ಯದ್ ರಫಿ ಎಂದು ಪೊಲೀಸರಿಗೆ ತಿಳಿಯುತ್ತೆ. ಆಗ ಪೊಲೀಸರು ಸೈಯ್ಯದ್ ರಫಿ ಎಲ್ಲಿದ್ದಾನೆ ಎಂದು ಹುಡುಕುವಷ್ಟರಲ್ಲಿ ಆತ ಸರಗಳ್ಳತನ ಮಾಡಿ ರಾಮನಗರ ಜೈಲು ಸೇರಿದ್ದಾನೆ ಎಂದು ತಿಳಿಯುತ್ತದೆ. ಮಂಡ್ಯ ಪೊಲೀಸರು ರಾಮನಗರಕ್ಕೆ ತೆರಳಿ ವಿಶೇಷ ಅನುಮತಿ ಪಡೆದು ರಫಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಇದನ್ನೂ ಓದಿ: ಬೀದಿ ನಾಯಿಯನ್ನೂ ಬಿಡದ ಕಾಮುಕ – ಸಿಸಿಟಿವಿಯಲ್ಲಿ ರೆಕಾರ್ಡ್!
ಸೈಯದ್ ರಫಿ ಒಬ್ಬ ಸೈಕೋ!
ಕೊಲೆ ಮಾಡಿರುವ ಸೈಯ್ಯದ್ ರಫಿ ಸೈಕೋ ಆಗಿದ್ದು, ಈ ಹಿಂದೆ ಹಲವು ಅಪರಾಧ ಕೃತ್ಯಗಳನ್ನು ನಡೆಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತನೆ ಮಾಡಿರುತ್ತಾನೆ. ಶ್ರೀರಂಗಪಟ್ಟಣದ ಬಳಿ ಕೊಲೆ ಮಾಡಿದ ಮರುದಿನವೇ ರಫಿ ರಾಮನಗರದಲ್ಲಿ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡಿರುತ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಕೋ ಮನಸ್ಥಿತಿ ಹೊಂದಿದ್ದ ಸಯ್ಯದ್ ರಫಿ, ಸರಗಳ್ಳತ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.