ವ್ಯಕ್ತಿಯ ಬರ್ಬರ ಹತ್ಯೆ – 2ನೇ ಹೆಂಡತಿಯ ಅಕ್ರಮ ಸಂಬಂಧವೇ ಕಾರಣ ಎಂದ ಮೊದಲ ಪತ್ನಿ

Public TV
1 Min Read
CRIME 6

ಕೋಲಾರ: ಸೆಕ್ಯೂರಿಟಿ ಗಾರ್ಡ್ ಒಬ್ಬನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಮುಳಬಾಗಿಲಿನ (Mulabagilu ) ಮಿಣಜೇನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಮಂಜುನಾಥ್ (48) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಎರಡನೇ ಪತ್ನಿಯ (Wife) ಅಕ್ರಮ ಸಂಬಂಧಕ್ಕೆ ಆತ ಬಲಿಯಾಗಿದ್ದಾನೆ ಎಂದು ಮೊದಲ ಪತ್ನಿ ಆರೋಪಿಸಿದ್ದು, ಅದೇ ಕಾರಣಕ್ಕೆ ಮಂಜುನಾಥ್ ಹತ್ಯೆಯಾದರೂ ಎರಡನೇ ಪತ್ನಿ ಸ್ಥಳಕ್ಕೆ ಬಂದಿಲ್ಲ ಎಂದು ಆಕೆ ಆರೋಪಿಸಿದ್ದಾಳೆ. ಹತ್ಯೆಯಾದ ಮಂಜುನಾಥ್ ಮೊದಲ ಪತ್ನಿಯನ್ನು ತೊರೆದು ಎರಡನೇ ಪತ್ನಿಯೊಂದಿಗೆ ವಾಸವಾಗಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮರಳು ದಂಧೆ ತಡೆಯಲು ಹೋಗಿದ್ದ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ

ಕೊಲೆಯಾದ ಮಂಜುನಾಥ್, ಬಂಗಾರಪೇಟೆಯ ಮಾದಮುತ್ತನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನೊಂದಿಗೆ ಹಣದ ವಿಚಾರವಾಗಿ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಹತ್ಯೆಯಾಗಿರುವ ಸಾಧ್ಯತೆ ಕೂಡ ಇದೆ. ಈ ಬಗ್ಗೆ ಎರಡು ಮೂರು ಬಾರಿ ನ್ಯಾಯ ಪಂಚಾಯಿತಿ ಕೂಡ ಮಾಡಲಾಗಿತ್ತು. ಆದರೂ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಂಕಿತ ಕೊಲೆ ಆರೋಪಿ ಶ್ರೀನಿವಾಸ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ರನ್ನಿಂಗ್ ರೇಸ್‌ನಲ್ಲಿ ಬಹುಮಾನ ಸಿಗದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

Share This Article