ಬೆಂಗಳೂರು: ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ಹುಡುಗಿ ತಂದೆಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಅನ್ವರ್ ಹುಸೇನ್ ಹತ್ಯೆಯಾದ ವ್ಯಕ್ತಿ. ಝಹೀದ್ ಎಂಬಾತನಿಂದ ಕೃತ್ಯ ಎಸಗಿದ್ದಾನೆ. ಅನ್ವರ್ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಪರಿಸರ ಪ್ರವಾಸೋದ್ಯಮಕ್ಕೆ ಹೊಸ ನೀತಿ: ಈಶ್ವರ ಖಂಡ್ರೆ
ಝಹೀದ್ ಪ್ರೀತಿಸುವಂತೆ 15 ವರ್ಷದ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಈ ವಿಚಾರವನ್ನ ಬಾಲಕಿ ತನ್ನ ತಂದೆ ಅನ್ವರ್ ಹುಸೇನ್ ತಿಳಿಸಿದ್ದಳು. ಕಳೆದ ಮೂರು ತಿಂಗಳ ಹಿಂದೆ ಅನ್ವರ್ ಆರೋಪಿ ಝಹೀದ್‌ಗೆ ಬುದ್ದಿ ಹೇಳಿದ್ದ.
ನಿನ್ನೆ ಮತ್ತೆ ಅಪ್ರಾಪ್ತೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ ಆರೋಪಿ ಪೀಡಿಸಿದ್ದ. ನಿನ್ನೆ ರಾತ್ರಿ ಮಗಳ ವಿಚಾರಕ್ಕೆ ಮತ್ತೆ ಬರಬೇಡ ಎಂದು ಹೇಳಲು ಬಂದಾಗ ಅನ್ವರ್‌ಗೆ ಚಾಕುವಿನಿಂದ ಇರಿದಿದ್ದಾನೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಗರ್ಭಿಣಿಗೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ – ರಾಜಸ್ಥಾನದಲ್ಲಿ ಮಹಿಳೆಯರ ಸುರಕ್ಷತೆ ನಿರ್ಲಕ್ಷ್ಯ ಎಂದು ನಡ್ಡಾ ಟೀಕೆ
Web Stories