Connect with us

Crime

ನಡು ರಸ್ತೆಯಲ್ಲೇ 8 ಬಾರಿ ಇರಿದು ಪತ್ನಿಯನ್ನ ಕೊಂದ

Published

on

ಹೈದರಾಬಾದ್: ಪತಿಯೊಬ್ಬ ನಡು ರಸ್ತೆಯಲ್ಲಿ 8 ಬಾರಿ ಪತ್ನಿಯನ್ನು ಕೊಲೆಗೈದಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ನಾಗಮಣಿ ಪತಿ ಮೋಹನ್ ರಾವ್‍ನಿಂದ ಕೊಲೆಯಾದ ಪತ್ನಿ. ನಾಗಮಣಿ ಮತ್ತು ಮೋಹನ್ ರಾವ್ ಪ್ರೀತಿಸಿ 2004ರಲ್ಲಿ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ದಂಪತಿಗೆ ದುರ್ಗಾ ರಾವ್ (13) ಮತ್ತು ಹಂಸಿಕಾ (11) ಎಂಬ ಮಕ್ಕಳಿದ್ದಾರೆ. ಮೋಹನ್ ಖಾಸಗಿ ಸಾರಿಗೆ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಆದ್ರೆ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ನಾಗಮಣಿ ಸಹ ಮೂರು ವರ್ಷಗಳ ಹಿಂದೆ ಆಹಾರ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ನಾಲ್ಕು ತಿಂಗಳ ಹಿಂದೆ ಮೋಹನ್‍ಗೆ ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕಿಸಲು ಪ್ರಾರಂಭಿಸಿದ್ದಾನೆ. ಇದೇ ಸಮಯಕ್ಕೆ ಒಂದು ದಿನ ಮೋಹನ್ ಮೊಬೈಲ್ ಮಿಸ್ ಆಗುತ್ತದೆ. ಕೆಲ ದಿನಗಳ ಮಿಸ್ ಆಗಿದ್ದ ಮೊಬೈಲ್ ನಾಗಮಣಿ ಅವರಿಗೆ ಸಿಕ್ಕಿದೆ. ಆದ್ರೆ ಮೊಬೈಲನಲ್ಲಿಯ ಸಿಮ್ ನಾಗಮಣಿ ಬದಲಿಸಿದ್ದರು. ಈ ಎಲ್ಲ ಬೆಳವಣಿಗೆ ನೋಡಿದ ಮೋಹನ್ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಲು ಆರಂಭಿಸಿದ್ದಾನೆ.

ಮೋಹನ್ ಅಕ್ಟೋಬರ್ 25ರಂದು ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಬೀತಳಾದ ನಾಗಮಣಿ ತವರು ಮನೆ ಸೇರಿದ್ದರು. ಶನಿವಾರ ರಾತ್ರಿ ಪತ್ನಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಮೋಹನ್, ನಾಗಮಣಿ ಮಳಿಗೆಯಿಂದ ರಾತ್ರಿ 11.30ಕ್ಕೆ ಬರೋದನ್ನು ಖಾತ್ರಿ ಮಾಡಿಕೊಂಡಿದ್ದಾನೆ. ಸಹದ್ಯೋಗಿ ಜೊತೆ ಆಹಾರ ಮಳಿಗೆಯಿಂದ ಹೊರ ಬಂದ ನಾಗಮಣಿ ನವರಂಗ ಚಿತ್ರಮಂದಿರ ಬಳಿ ಎದುರಾದ ಮೋಹನ್ 8 ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ನಾಗಮಣಿ ಜೊತೆಯಲ್ಲಿದ್ದ ಸಹದ್ಯೋಗಿ ಚೀರಾಟ ಕೇಳಿ ಜನರು ಜಮಾವಣೆಗೊಂಡಿದ್ದಾರೆ.

ನಾಗಮಣಿ ನೆರೆಹೊರೆಯವರು ಪ್ರಕಾರ, ಅತ್ತೆಯ ಮಗನಿಗೆ ಸೊಸೆಯನ್ನು ಕೊಲ್ಲಲು ಪ್ರಚೋದನೆ ನೀಡಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *