ಚಿತ್ರದುರ್ಗ: ಮದ್ಯಪಾನ ಮಾಡಲು ಹಣ ಕೊಡದಿದ್ದಕ್ಕೆ ಅಜ್ಜಿಯನ್ನೇ ಕೊಲೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಮೃತ ವೃದ್ಧೆಯನ್ನು ಲಕ್ಷ್ಮಮ್ಮ (70) ಎಂದು ಗುರುತಿಸಲಾಗಿದೆ. ಮೃತ ಅಜ್ಜಿಯ ಓರ್ವ ಮಗ ಶ್ರೀನಿವಾಸ ಬೆಂಗಳೂರಿನಲ್ಲಿ ವಾಸವಾಗಿದ್ದರು. ತನ್ನ ತಾಯಿಗೆ ಆಸರೆಯಾಗಿರಲೆಂದು ಸಂಬಂಧಿಯಾದ ಸಂಜೀವ ರೆಡ್ಡಿ ಎಂಬಾತನನ್ನು ಮನೆಯಲ್ಲಿರುವಂತೆ ಹೇಳಿದ್ದನು. ಹೀಗಾಗಿ ಕಳೆದ ಒಂದು ತಿಂಗಳಿಂದ ಅಜ್ಜಿ ಮಾಡಿಟ್ಟ ಊಟ ಸವಿಯುತ್ತಿದ್ದ ಆಸಾಮಿ, ತನ್ನಲ್ಲಿದ್ದ ಹಣವೆಲ್ಲಾ ಖಾಲಿಯಾದ ಬಳಿಕ ಮದ್ಯಪಾನ ಮಾಡಲು ಹಣ ನೀಡುವಂತೆ ಅಜ್ಜಿಗೆ ದುಂಬಾಲು ಬಿದ್ದಿದ್ದನು. ಇದನ್ನೂ ಓದಿ: ಮಣಿಪುರ ಸಿಎಂ ಬಿರೇನ್ ಸಿಂಗ್ ದಿಢೀರ್ ರಾಜೀನಾಮೆ!
- Advertisement -
- Advertisement -
ಆಗ ಇವನ ಮಾತಿಗೆ ತಲೆಕೆಡಿಸಿಕೊಳ್ಳದ ಅಜ್ಜಿಯ ಮೇಲೆ ಆಕ್ರೋಶಗೊಂಡು ಮಚ್ಚು, ದೊಣ್ಣೆ ಸೇರಿದಂತೆ ವಿವಿಧ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಬರ್ಬರವಾಗಿ ಕೊಲೆಗೈದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಘಟನೆಯಿಂದ ಜನ ಬೆಚ್ಚಿಬಿದ್ದಿದ್ದು, ಆರೋಪಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಭಿನ್ನ ಶಮನಕ್ಕೆ ಮುಂದಾದ ಹೈಕಮಾಂಡ್; ವಿಜಯೇಂದ್ರಗೆ ತುರ್ತು ದೆಹಲಿಗೆ ಬುಲಾವ್
- Advertisement -
- Advertisement -
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.