ಶಿವಮೊಗ್ಗ: ನಿಷೇಧವಿದ್ದರೂ ದೀಪಾವಳಿಯ ವಿಶೇಷ ಆಚರಣೆಗಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಹೋರಿ ತಿವಿದು ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಅಯನೂರು ಕೋಟೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಾಳೇಕೊಪ್ಪ ನಿವಾಸಿಯಾದ ಚಂದ್ರಶೇಖರ್ (40) ಎಂಬ ವ್ಯಕ್ತಿಯೇ ಮೃತ ದುರ್ದೈವಿಯಾಗಿದ್ದು, ದೀಪವಾಳಿ ವಿಶೇಷ ಆಚರಣೆ ವೇಳೆ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ.
- Advertisement 2-
- Advertisement 3-
ಹೋರಿ ತಿವಿದ ರಭಸಕ್ಕೆ ಚಂದ್ರಶೇಖರ್ ಅವರ ತೊಡೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರ ಗಾಯವಾಗಿದ್ದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಸ್ಪರ್ಧೆಯ ವೇಳೆ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದೆ ಇರುವುದೇ ಅವಘಡಕ್ಕೆ ಕಾರಣವಾಗಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಪರ್ಧೆ ನಡೆಯುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿದ್ದರು ಜಾಣ ಮೌನವಹಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.