ರಾಂಚಿ: ಮೂರನೇ ಮದುವೆಯಾಗಿದ್ದ ಬಾವನನ್ನು ಆತನ ಬಾಮೈದನೇ ಹತ್ಯೆಗೈದ ಘಟನೆ ಜಾರ್ಖಂಡ್‍ನ ಪೂರ್ವ ಸಿಂಗ್‍ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಲಾಡು ಹೈಬೂರು (35) ಮೃತ ವ್ಯಕ್ತಿ. ದುಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲಿಸಂ ಪೀಡಿತ ಪ್ರದೇಶದ ಬಾವಿಯೊಂದರಲ್ಲಿ ಲಾಡು ಹೈಬೂರ್ ಅವರ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದೆ.
ಮಾರ್ಚ್ 16ರಂದು ಹೈಬೂರು ನಾಪತ್ತೆಯಾಗಿದ್ದರು. ಆದರೆ ಅವರ ಕುಟುಂಬವು ಯಾವುದೇ ಪೊಲೀಸ್ ದೂರು ನೀಡಿರಲಿಲ್ಲ. ಸ್ಥಳೀಯರ ಹೇಳಿಕೆಯ ಆಧಾರದ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು ಲಾಡು ಹೈಬೂರು ನಾಪತ್ತೆಯಾದ ಹಿನ್ನೆಲೆಯನ್ನು ಕಲೆಹಾಕಿದರು.
ಮದುವೆಯ ವಿಷಯವಾಗಿ ತನ್ನ ಬಾಮೈದನೊಂದಿಗೆ ಜಗಳವಾಡಿದ್ದ ನಂತರ ಹೈಬೂರು ನಾಪತ್ತೆಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಎಂ.ತಮಿಳು ವನನ್ ಮಾಹಿತಿ ನೀಡಿದರು. ಇದನ್ನೂ ಓದಿ: ಪಾಕಿಸ್ತಾದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ದಾಳಿ
ಆರಂಭದಲ್ಲಿ ಲಾಡು ಹೈಬೂರಿನ ಮನೆಯವರು ಆತನ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದರು. ಆದರೆ ಪೊಲೀಸರು ಆತನ ತಾಯಿ ನಂದಿಗೆ ಮನವೊಲಿಸಿ, ಆಕೆಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಹತ್ಯೆಯಾದ ವ್ಯಕ್ತಿಯ ಬಾಮೈದ ಮತ್ತು ಇತರ ಮೂವರನ್ನು ಬಂಧಿಸಿದ್ದಾರೆ. ನಂತರ ಘಟ್ಸಿಲಾ ಉಪವಿಭಾಗದ ಘೋರಬಂಡಾ ಪೆÇಲೀಸ್ ಠಾಣಾ ವ್ಯಾಪ್ತಿಯ ಮಡೋಟೋಲಿಯಾ ಗ್ರಾಮದ ಅವರ ಮನೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ನಕ್ಸಲೀಯರು ತುಂಬಿರುವ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ನಿಷೇಧಾಜ್ಞೆ ಜಾರಿ, ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ- ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ?