ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ರಥಬೀದಿಯ ವೀರವೆಂಕಟೇಶ ಅಪಾರ್ಟ್ ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ವಿನಾಯಕ್ ಕಾಮತ್(44) ಎಂದು ಗುರುತಿಸಲಾಗಿದೆ. ವೀರವೆಂಕಟೇಶ ಅಪಾರ್ಟ್ ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿಯಿಂದ ಕೃತ್ಯವೆಸಗಿದ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ
ಸಿಮೆಂಟ್ ಹಾಕಿದ ರಸ್ತೆಯಲ್ಲಿ ಕಾರು ಚಲಾಯಿಸಿದಕ್ಕೆ ವಿನಾಯಕ್ ಕಾಮತ್ ಜೊತೆ ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿ ಜಗಳವಾಡಿದ್ದಾರೆ. ಹೀಗೆ ಮಾತು ಅತಿರೇಕಗೊಂಡು ಕೋಪಕ್ಕೆ ತಿರುಗಿ ಆರೋಪಿಗಳು ವಿನಾಯಕ್ ಕಾಮತ್‍ಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಚಿಕಿತ್ಸೆ ಫಲಾಕಾರಿಯಾಗದೇ ವಿನಾಯಕ್ ಕಾಮತ್ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಆರೋಪಿಗಳು ಕೃತ್ಯ ಎಸಗಿದ ದೃಶ್ಯ ಫ್ಲಾಟ್‍ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.