ನವದೆಹಲಿ: ಮಾಳವೀಯಾ ನಗರದಲ್ಲಿ (Malviya Nagar) ಶುಕ್ರವಾರ ಕಾಲೇಜು ವಿದ್ಯಾರ್ಥಿನಿಯೊಬ್ಬಳ (Student) ಮೇಲೆ ರಾಡ್‌ನಿಂದ (Rod) ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತ ಯುವತಿಯನ್ನು ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿ ನಾಗ್ರಿಸ್ ಎಂದು ಗುರುತಿಸಲಾಗಿದ್ದು, ಕಾಲೇಜು ಆವರಣದ ಹೊರಗೆ ಹಲ್ಲೆ ನಡೆಸಲಾಗಿದೆ.
ಪೊಲೀಸರ ಪ್ರಕಾರ, ನಾಗ್ರಿಸ್ ತನ್ನ ಸ್ನೇಹಿತನೊಂದಿಗೆ ಕಾಲೇಜು ಆವರಣದ ಹೊರಗಿದ್ದ ಉದ್ಯಾನವನಕ್ಕೆ ಬಂದಿದ್ದಳು. ಈ ವೇಳೆ ಯುವತಿಯ ಸ್ನೇಹಿತ ಇರ್ಫಾನ್ ಆಕೆಯನ್ನು ಹತ್ಯೆ ಮಾಡಿದ್ದಾನೆ. ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಇರ್ಫಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ನಾಗ್ರಿಸ್‌ನನ್ನು ಮದುವೆಯಾಗಲು ಇರ್ಫಾನ್ ನಿರ್ಧರಿಸಿದ್ದ. ಈ ಹಿನ್ನೆಲೆ ತನ್ನ ಮದುವೆಯ ಪ್ರಸ್ತಾಪವನ್ನು ಯುವತಿಯ ಕುಟುಂಬದ ಮುಂದೆ ಇಟ್ಟಿದ್ದ. ಆದರೆ ಸಂತ್ರಸ್ತೆಯ ಕುಟುಂಬ ಅವರ ಮದುವೆಯನ್ನು ನಿರಾಕರಿಸಿತ್ತು. ಈ ಹಿನ್ನೆಲೆ ನಾಗ್ರಿಸ್ ಇರ್ಫಾನ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಕುಪಿತಗೊಂಡ ಇರ್ಫಾನ್ ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಅಪಘಾತವಾದ ಕಾರಿಗೆ ವಿದ್ಯುತ್ ಶಾಕ್ – ಸಹಾಯಕ್ಕೆ ಬಂದ ಇಬ್ಬರು ಸಾವು
Advertisement
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಉಪ ಪೊಲೀಸ್ ಆಯುಕ್ತ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಇರ್ಫಾನ್‌ನನ್ನು ಬಂಧಿಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆ ವೇಳೆ ಪೊಲೀಸರು ಸಂತ್ರಸ್ತೆಯ ದೇಹದ ಬಳಿ ಇದ್ದ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೃತ ಯುವತಿಯ ತಲೆಯ ಮೇಲೆ ಗಾಯಗಳಿರುವುದನ್ನು ಗಮನಿಸಲಾಗಿದೆ.
Advertisement
दिल्ली में जहां एक महिला को उसके घर के बाहर गोली मारके उसकी हत्या की गई वहीं दूसरी तरह मालवीय नगर जैसे पॉश इलाक़े में लड़की को रॉड से मारा गया। दिल्ली बेहद असुरक्षित है। किसी को फ़र्क़ नहीं पड़ता। सिर्फ़ अख़बार की खबरों में लड़कियों के नाम बदल जाते हैं, अपराध नहीं रुकते।
— Swati Maliwal (@SwatiJaiHind) July 28, 2023
ದೆಹಲಿ ಮಹಿಳಾ ಆಯೋಗದ ಸ್ವಾತಿ ಮಲಿವಾಲ್ ಅವರು ಘಟನೆಯನ್ನು ಗಮನಿಸಿ ಟ್ವೀಟ್ ಮಾಡಿದ್ದಾರೆ. ಮಾಳವೀಯಾ ನಗರದಂತಹ ಐಷಾರಾಮಿ ಪ್ರದೇಶದಲ್ಲಿ, ರಾಡ್‌ನಿಂದ ಹೊಡೆದು ಹುಡುಗಿಯನ್ನು ಕೊಂದಿದ್ದಾರೆ. ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ. ಇದು ಯಾರಿಗೂ ಮುಖ್ಯವಲ್ಲ. ಪತ್ರಿಕೆಗಳ ವರದಿಗಳು, ಹುಡುಗಿಯರ ಹೆಸರುಗಳನ್ನು ಬದಲಾಯಿಸಲಾಗುತ್ತದೆ ಮತ್ತು ಅಪರಾಧಗಳು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: Udupi College Video Row – ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು ಮಂಜೂರು
Web Stories