– ಮಗುವಿನೊಂದಿಗೆ ನಾದಿನಿ ಜೊತೆ ಮನೆ ಮಾಡ್ದ
ಭೋಪಾಲ್: ವ್ಯಕ್ತಿಯೊಬ್ಬ ಎರಡು ಮದುವೆಯಾಗಿ ನಾಲ್ಕು ಮಕ್ಕಳಿದ್ದರೂ ಮತ್ತೊಂದು ವಿವಾಹವಾಗಲೂ ಅಪ್ರಾಪ್ತೆ ನಾದಿನಿಯ ಮೇಲೆ ಕಣ್ಣಾಕಿ ಅಪಹರಿಸಿರುವ ಘಟನೆ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ನಡೆದಿದೆ.
Advertisement
ಪೊಲೀಸರು ಪತ್ನಿ ನೀಡಿದ ದೂರಿನ ಆಧಾರ ಮೇರೆಗೆ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ತನ್ನ ಜೊತೆ ಮೂರು ವರ್ಷದ ಮಗುವನ್ನು ಕರೆದುಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಅಪ್ರಾಪ್ತೆ ಸೋದರಿ ಆಗಾಗ ತನ್ನ ಅಕ್ಕನ ಮನೆಗೆ ಬರುತ್ತಿದ್ದಳು. ಆಗ ಬಾವ ನಾದಿನಿಯನ್ನು ಮದುವೆಯಾಗಬೇಕು ಎಂದು ಆಕೆಯ ಮೇಲೆ ಕಣ್ಣು ಹಾಕಿದ್ದನು. ಅದರಂತೆಯೇ ಆಕೆಯ ಮನಸ್ಸನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದನು. ಈ ವಿಚಾರ ಪತ್ನಿಗೆ ತಿಳಿದು ಜಗಳ ಮಾಡಿದ್ದಾಳೆ. ಜೊತೆಗೆ ಮತ್ತೆ ಈ ರೀತಿ ಮಾಡಬಾರದು ಎಂದು ಎಚ್ಚರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಅಪ್ರಾಪ್ತೆ ನಾದಿನಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ.
Advertisement
ಜೊತೆಗೆ ಯಾರು ಪ್ರಶ್ನೆ ಮಾಡಬಾರದು ಮತ್ತು ಅನುಮಾನ ಬಾರದಿರಲಿ ಎಂದು ತನ್ನ ಮೂರು ವರ್ಷದ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ಅಕ್ಟೋಬರ್ 17 ರಂದು ಆರೋಪಿ ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ. ಮಹಾರಾಷ್ಟ್ರದ ಬೇರೆ ಬೇರೆ ಜಾಗಗಳಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ಮಹಾರಾಷ್ಟ್ರದ ನಂದುರ್ಬಾರ್ ಎಂಬಲ್ಲಿ ಬಾಡಿಗೆ ಮನೆ ಮಾಡಿ ಅಪ್ರಾಪ್ತೆ ಹಾಗೂ ಮಗುವನ್ನು ಇರಿಸಿದ್ದಾನೆ.
ಆರೋಪಿಯ ಪತ್ನಿ ಅಕ್ಟೋಬರ್ 24 ರಂದು ಸೋದರಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ನಾವು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದೆವು. ಆಗ ಆರೋಪಿ ಪತ್ತೆಯಾಗಿದ್ದು, ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ಶಹಾದಾದಿಂದ ಬಂಧಿಸಲಾಗಿದೆ. ಮಗು ಜೊತೆಗಿದ್ದರೆ ಬಾಡಿಗೆ ಮನೆ ಸುಲಭವಾಗಿ ಸಿಗುತ್ತೆ ಎಂಬ ಉದ್ದೇಶದಿಂದ ಕಂದಮ್ಮನನ್ನು ಕರೆದುಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಮಗು ಮತ್ತು ಅಪ್ರಾಪ್ತೆಯನ್ನು ರಕ್ಷಿಸಲಾಗಿದೆ. ಆರೋಪಿಯ ವಿರುದ್ಧ ಅಪಹರಣ ಮತ್ತು ಪೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಿಸಲಾಗಿದೆ.