ಹುಬ್ಬಳ್ಳಿ: ಆನ್‌ಲೈನ್ ಜೂಜಾಟದಿಂದ 11 ಕೋಟಿ ಗೆದ್ದ ಸ್ನೇಹಿತನನ್ನೇ ಅಪಹರಣಗೈದ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆನ್‌ಲೈನ್ ಜೂಜಾಟದ ಅಪ್ಲಿಕೇಶನ್‌ಗಳು ಹೆಚ್ಚಾಗಿದ್ದು, ಈ ಆಪ್‌ಗಳಲ್ಲಿ ದಿನಕ್ಕೆ ನೂರು ರೂಪಾಯಿಯಿಂದ ಕೋಟಿ ರೂಪಾಯಿ ಗೆಲ್ಲುವವರು ಇದ್ದಾರೆ. ಅದೇ ತರಹ ಸೋಲುವವರು ಇದ್ದಾರೆ. ಆದರೆ ಹುಬ್ಬಳ್ಳಿಯ ಗಿಲಾವರ್‌ಗೆ ಮಾತ್ರ ಅದೃಷ್ಟ ಫುಲ್ ಕುಲಾಯಿಸಿದೆ. ಆನ್ ಲೈನ್ ಕ್ಯಾಸಿನೋ ಆಪ್ ನಲ್ಲಿ ಬೇರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಈಗ ಇದೇ ಗಿಲಾವರ್ ಪ್ರಾಣ ಸ್ನೇಹಿತ ಗರೀಬ್‌ನ ಪ್ರಾಣಕ್ಕೆ ಕುತ್ತು ತಂದಿದೆ. ಹಣಕ್ಕಾಗಿ ಗರೀಬ್ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ.
Advertisement
ಗಿಲಾವರ್ ಮತ್ತು ಗರೀಬ್ ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಗಿವಾವರ್ ಗೆ ಆನ್ ಲೈನ್ ಜೂಜಾಟವಾಡುವ ಅಭ್ಯಾಸವಿದ್ದು, ಹಲವಾರು ದಿನಗಳಿಂದ ಆನ್ ಲೈನ್ ಕ್ಯಾಸಿನೋ ಜೂಜು ಆಡುತ್ತಿದ್ದ. ಕಳೆದ ತಿಂಗಳು ಗಿಲಾವರ್ ಅದೃಷ್ಟ ಕುಲಾಯಿಸಿ ಬರೊಬ್ಬರಿ 11 ಕೋಟಿ ಗೆದ್ದಿದ್ದ.
Advertisement
Advertisement
ಹಣವನ್ನು ಬಿಡಿಸಿಕೊಳ್ಳಲು ಗಿಲಾವರ್‌ಗೆ ಬ್ಯಾಂಕ್ ಖಾತೆ ಇರಲಿಲ್ಲ. ಹೀಗಾಗಿ ಆತನ ಸ್ನೇಹಿತ ಗರೀಬ್ ಬಳಿ ಹಣ ತೆಗೆಯಲು ಸಹಾಯ ಕೇಳಿದ್ದು, ಗರೀಬ್ ತನ್ನ ಇನ್ನೊಬ್ಬ ಸ್ನೇಹಿತ ಮಹಮ್ಮದ್ ಎಂಬಾತನಗೆ ವಿಷಯ ತಿಳಿಸಿ, ಆತನ ಖಾತೆಗೆ 2 ಕೋಟಿ ಹಣ ವರ್ಗಾವಣೆ ಮಾಡಿಸಿದ್ದಾನೆ. ಹಣ ವರ್ಗಾವಣಾಗುತ್ತಿದ್ದಂತೆ, ಗರೀಬ್, ಗಿಲಾವರ್ ಮತ್ತು ಮಹಮ್ಮದ್ ಫುಲ್ ಮಜಾ ಮಾಡಿದ್ದಾರೆ. ಇದನ್ನೂ ಓದಿ: ಬಿಕಿನಿ ಧರಿಸಿದ ಫೋಟೋ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡ ಪ್ರಾಧ್ಯಾಪಕಿ
Advertisement
ಸ್ವಲ್ಪ ದಿನವಾದ ಮೇಲೆ ಮಹಮ್ಮದ್‌ಗೆ ದುರಾಸೆ ಹುಟ್ಟಿಕೊಂಡಿದೆ. ಇವರ ಬಳಿ ಇನ್ನೂ ಹಣವಿದೆ ಹೇಗಾದರೂ ಮಾಡಿ ವಶಪಡಿಸಿಕೊಳ್ಳಬೇಕು ಎಂದು ಆಲೋಚಿಸಿ ಗಿಲಾವರ್‌ನನ್ನು ಕಿಡ್ನ್ಯಾಪ್ ಮಾಡುವ ಪ್ಲಾನ್ ಮಾಡಿದ್ದಾನೆ. ಈ ವಿಚಾರವನ್ನು ಸ್ನೇಹಿತರಿಗೆ ತಿಳಿಸಿದ್ದಾನೆ. ಸ್ನೇಹಿತರು ಈ ಕೆಲಸಕ್ಕೆ ಸಾಥ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಗಿಲಾವರ್‌ಗೆ ಕರೆ ಮಾಡಿದಾಗ ಆತ ಊರಿಗೆ ಹೋಗಿರುವ ವಿಚಾರ ತಿಳಿಯುತ್ತದೆ. ಗಿಲಾವರ್ ಇಲ್ಲದ ಹಿನ್ನೆಲೆಯಲ್ಲಿ ಗರೀಬ್‌ನನ್ನು ಅಪಹರಣ ಮಾಡಲು ಗ್ಯಾಂಗ್ ಮುಂದಾಗುತ್ತದೆ. ಆ.6 ರಂದು ಸ್ನೇಹಿತರ ಮೂಲಕ ಗರೀಬ್‌ಗೆ ಬಿವಿಬಿ ಕಾಲೇಜಿಗೆ ಬರುವಂತೆ ಕರೆ ಮಾಡಿದ್ದಾರೆ. ಗರೀಬ್ ಕಾಲೇಜಿಗೆ ಬರುತ್ತಿದ್ದಂತೆ ಗ್ಯಾಂಗ್ ಕಿಡ್ನ್ಯಾಪ್ ಮಾಡಿ, ಗಿಲಾವರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಗಾಬರಿಗೊಂಡ ಗಿಲಾವರ್, ಗರೀಬ್ ಮನೆಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಮನೆಯವರು ವಿವಿಧ ಕಡೆ ಗರೀಬ್‌ಗಾಗಿ ಹುಡುಕಿದ್ದಾರೆ. ಬಳಿಕ ಬೆಂಡಿಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಒಟ್ಟು ಐದು ತಂಡಗಳನ್ನು ರಚಿಸಿಕೊಂಡು, ಶೀಘ್ರವಾಗಿ ಕಾರ್ಯೋನ್ಮುಖರಾಗಿದ್ದಾರೆ. ಮೊಬೈಲ್ ನೆಟ್‌ವರ್ಕ್ ಆಧರಿಸಿ ಕಿಡ್ನ್ಯಾಪ್ ಮಾಡಿ ಗರೀಬ್ ಬಚ್ಚಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಕಿಡ್ನ್ಯಾಪ್ ಮಾಡಿದ್ದ ಮಹಮ್ಮದ್ ಮತ್ತು ಆತನ 7 ಮಂದಿ ಸ್ನೇಹಿತರು ಬಂಧಿಸಿದ್ದಾರೆ.