ನೆಲಮಂಗಲ\ತುಮಕೂರು: ಹೆಂಡತಿಯೊಂದಿಗೆ ಸ್ನ್ಯಾಕ್ಸ್ ತಿನ್ನಲು ಬಂದಿದ್ದ ವ್ಯಕ್ತಿಯನ್ನು ಕಿಡ್ಯ್ನಾಪ್ ಮಾಡಿ, ಕೊಲೆ ಮಾಡಿ ಎಸೆದಿರುವ ಘಟನೆ ತುಮಕೂರಿನ (Tumakuru) ಜಯಪುರದಲ್ಲಿ ನಡೆದಿದೆ.
ಸೋಲೂರು ಮೂಲದ ದಿಲೀಪ್ ಮೃತ ದುರ್ದೈವಿ. ದಾಬಸ್ ಪೇಟೆಯಲ್ಲಿ ಕಾರ್ಗೋ ನಡೆಸುತ್ತಿದ್ದ ದಿಲೀಪ್, ಸೋಲೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಈ ವೇಳೆ ಮನೆ ಮಾಲೀಕನ ಪತ್ನಿ ಅಮೃತಳ ಪರಿಚಯವಾಗಿತ್ತು. 5 ವರ್ಷದ ಹಿಂದೆ ದಿಲೀಪ್ ವಿವಾಹಿತ ಮಹಿಳೆ ಅಮೃತಳನ್ನು ಮದುವೆಯಾಗಿದ್ದ. ಇದು ಕುಟುಂಬಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನೂ ಓದಿ: ಯುವತಿಯರ ಜೊತೆ ರಾಸಲೀಲೆ – ಮೊಬೈಲ್‌ನಲ್ಲಿ ವಿಡಿಯೋ ಅಲ್ಬಂ ಓಪನ್ ಮಾಡಿದ್ದ ಕಾಮುಕ ಅರೆಸ್ಟ್
ಎಂದಿನಂತೆ ಭಾನುವಾರ ದಿಲೀಪ್ ಹಾಗೂ ಅಮೃತ ಸ್ನ್ಯಾಕ್ಸ್ ತಿನ್ನಲು ನೆಲಮಂಗಲಗೆ ಬಂದಿದ್ದರು. ಈ ವೇಳೆ ಐದಾರು ಜನ ದುಷ್ಕರ್ಮಿಗಳು ದಿಲೀಪ್ ಮೇಲೆ ಮಾರಾಕಾಸ್ತçಗಳಿಂದ ಹಲ್ಲೆ ಮಾಡಿ, ಆತನನ್ನು ಕಿಡ್ಯ್ನಾಪ್ (Kidnap) ಮಾಡಿದ್ದರು. ಬಳಿಕ ಕೊಲೆ ಮಾಡಿ ತುಮಕೂರಿನ ಜಯಪುರ ಬಯಲು ಪ್ರದೇಶದಲ್ಲಿ ಬಿಸಾಕಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೈಕ್‌ಗೆ ಡಿಕ್ಕಿಯಾಗಿ ಬಾವಿಗೆ ಬಿದ್ದ ವ್ಯಾನ್ – 11 ಮಂದಿ ದುರ್ಮರಣ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನೆಲಮಂಗಲ (Nelamangala) ಬಳಿ ಹತ್ಯೆ ಮಾಡಿ, ರಾತ್ರಿ ತುಮಕೂರಿನ ಜಯಪುರ ಬಳಿ ಶವ ಎಸೆದು ಆರೋಪಿಗಳು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಪೋಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಮೃತದೇಹವನ್ನು ಜಿಲ್ಲಾ ಶವಗಾರಕ್ಕೆ ರವಾನಿಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.