ವಾಷಿಂಗ್ಟನ್: ಅಪ್ರಾಪ್ತ ಮಕ್ಕಳಿಗೆ ಲೈಂಗಿಕವಾಗಿ ನಿಂದಿಸಿದ್ದಕ್ಕೆ ಅಪರಾಧಿಗೆ ಬರೋಬ್ಬರಿ 50 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಪ್ರಕರಣ ಟೆಕ್ಸಾಸ್‌ನ ಎಲ್ ಪಾಸೋದಲ್ಲಿರುವ ಯುಎಸ್ ಆರ್ಮಿ ಬೇಸ್ ಪ್ರದೇಶದಲ್ಲಿ ನಡೆದಿದೆ.
ಅಪರಾಧಿ ಕಾರ್ಲ್ ಮನ್ರೋ ಗಾರ್ಡ್ (50) ಟೆಕ್ಸಾಸ್ ದೇಶದ ಸೇನಾ ನೆಲೆಯಲ್ಲಿ ವಾಸವಿದ್ದ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಲೈಂಗಿಕವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಗಾರ್ಡನ್ 2018ರ ಕ್ರಿಸ್‌ಮಸ್ ಸಮಯದಲ್ಲಿ ಹಾಗೂ 2019ರ ಜುಲೈನಲ್ಲಿ ಇಬ್ಬರು ಮಕ್ಕಳಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಅದೇ ಇಬ್ಬರು ಮಕ್ಕಳ ಮಲತಂದೆಯೂ ಆಗಿದ್ದು, ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!
ಮಕ್ಕಳನ್ನು ಪೋಷಿಸಬೇಕಾದವರೇ ಕಾನೂನನ್ನು ಉಲ್ಲಂಘಿಸಿ ಅವರಿಗೆ ಕಿರುಕುಳ ನೀಡುವಂತಹ ಪ್ರಕರಣಗಳು ಅತೀ ಹೆಚ್ಚಾಗಿವೆ. ಅಪರಾಧಿ ಇನ್ನೊಬ್ಬರಿಗೆ ಇಂತಹ ಕಿರುಕುಳ ನೀಡಬಾರದು ಎಂಬ ಕಾರಣಕ್ಕೆ ಮಕ್ಕಳು ತನ್ನ ಮಲತಂದೆಯ ಮೇಲೆಯೇ ಆರೋಪ ಹೊರಿಸಿರುವುದು ನಿಜವಾಗಿಯೂ ಅವರ ವೀರತನವನ್ನು ಎತ್ತಿ ತೋರಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ!
ಕಾರ್ಲ್ ಮನ್ರೋ ಗಾರ್ಡ್ ಇಂತಹ ಹಲವು ಪ್ರಕರಣಗಳಲ್ಲಿ ತಪ್ಪಿತಸ್ಥನಾಗಿದ್ದಾನೆ ಎಂದು ಫೆಡರಲ್ ತೀರ್ಪುಗಾರರು ತಿಳಿಸಿದ್ದು, ಅಪರಾಧಿಗೆ 50 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.