ಅಪಘಾತದಲ್ಲಿ ಗಾಯಗೊಂಡಿದ್ದಾತ ಅಂಬುಲೆನ್ಸ್ ಬಾಗಿಲು ತೆಗೆಯೋಕಾಗದೆ ಸಾವನ್ನಪ್ಪಿದ!

Advertisements

ತಿರುವನಂತಪುರಂ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತ ಅದರಿಂದ ಹೊರಬರಲಾಗದೇ ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ.

Advertisements

ವರದಿಗಳ ಪ್ರಕಾರ ಸೋಮವಾರ ಸಂಜೆ ಕೋಝಿಕ್ಕೋಡ್‌ನಲ್ಲಿ ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಅಂಬುಲೆನ್ಸ್ ಮೂಲಕ ಸರ್ಕಾರಿ ವೈದ್ಯಕೀಯ ಕಾಲೇಜಿನ ಬಳಿ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಂಬುಲೆನ್ಸ್‌ನ ಬಾಗಿಲು ಜಾಮ್ ಆಗಿದ್ದರಿಂದ ಸುಮಾರು ಅರ್ಧ ಗಂಟೆಗಳ ಕಾಲ ಆತನನ್ನು ಅಂಬುಲೆನ್ಸ್‌ನಿಂದ ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಹದಗೆಟ್ಟ ರಸ್ತೆಯಿಂದ ಗ್ರಾಮಕ್ಕೆ ಬಾರದ ಅಂಬುಲೆನ್ಸ್- ಅರ್ಧ ಕಿ.ಮೀ ನಡೆದು ಬಂದ ತುಂಬುಗರ್ಭಿಣಿ

Advertisements

ಅಂಬುಲೆನ್ಸ್‌ನ ಚಾಲಕ ಮತ್ತು ಅಟೆಂಡರ್ ಸ್ವಲ್ಪ ಸಮಯ ಬಾಗಿಲು ತೆರೆಯಲು ಹರಸಾಹಸ ಪಟ್ಟಿದ್ದರು. ಬಳಿಕ ಸುತ್ತಮುತ್ತಲಿನ ಜನರು ಅಂಬುಲೆನ್ಸ್‌ನ ಕಿಟಕಿಯ ಗಾಜನ್ನು ಒಡೆದು, ಅಂಬುಲೆನ್ಸ್‌ನ ಒಳಗಿನಿಂದ ಬಾಗಿಲು ತೆರೆದಿದ್ದಾರೆ. ಆದರೆ ಗಾಯಾಳಿಗೆ ಚಿಕಿತ್ಸೆ ಕೊಡಿಸುವಲ್ಲಿ ವಿಳಂಬವಾಗಿದ್ದರಿಂದ ಆತ ಸವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Live Tv

Advertisements
Exit mobile version