ಬೆಳಗಾವಿ: ವಿದ್ಯಾರ್ಥಿಗಳ ಎದುರು ಸಂಗೊಳ್ಳಿ ಸಿನಿಮಾದ ಡೈಲಾಗ್ ಹೇಳಿದ ಎಂಬ ಒಂದೇ ಒಂದು ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ಮಲ್ಲಮ್ಮನ ಬೆಳವಡಿ ಗ್ರಾಮದ ನಿವಾಸಿ ಜಾಕೀರ ಮುಲ್ಲಾ ಎಂಬುವವರು ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾದವರು. ಈರಣ್ಣ ವಕ್ಕುಂದ ಹಲ್ಲೆ ಮಾಡಿದ ಪೊಲೀಸ್ ಪೇದೆ. ಸದ್ಯಕ್ಕೆ ಹಲ್ಲೆಗೊಳಗಾದ ಮುಲ್ಲಾ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
- Advertisement 2-
ಜಾಕೀರ ಮುಲ್ಲಾ ಬಸ್ ನಿಲ್ದಾಣದ ಸಮೀಪ ನಟ ದರ್ಶನ್ ಅಭಿನಯಿಸಿರುವ ಸಂಗೊಳ್ಳಿ ರಾಯಣ್ಣ ಸಿನಿಮಾ ಡೈಲಾಗ್ ಹೇಳುತ್ತಾ ನಿಂತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸ್ ಪೇದೆ ಈರಣ್ಣ ವಕ್ಕುಂದ ಏಕಾಏಕಿ ಹಾಡಹಗಲೇ ನಡುರಸ್ತೆಯಲ್ಲೇ ಸಾರ್ವಜನಿಕರ ಕಣ್ಣಮುಂದೆಯೇ ಜಾಕೀರ ಮೇಲೆ ಹಲ್ಲೆ ನಡೆಸಿದ್ದು, ಬೂಟು ಕಾಲಿನಿಂದ ಒದ್ದು ಕೌರ್ಯ ಮೆರೆದಿದ್ದಾರೆ.
- Advertisement 3-
ಎದ್ದೇಳಲಾಗದ ಸ್ಥಿತಿ ತಲುಪಿದ್ದ ಜಾಕೀರ ಅವರನ್ನು ಹೋಮ್‍ಗಾರ್ಡ್‍ಗಳಿಬ್ಬರು ಮಾನವೀಯತೆ ಇಲ್ಲದಂತೆ ರಸ್ತೆಯಲ್ಲಿಯೇ ಎಳೆದುಕೊಂಡು ಆಟೋರಿಕ್ಷಾಗೆ ಎತ್ತಿಹಾಕಿದ್ದಾರೆ. ಜಾಕೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- Advertisement 4-