ಅಮರಾವತಿ: ವ್ಯಕ್ತಿಯೊಬ್ಬ ಪತ್ನಿಯಿಂದ ವಿಚ್ಛೇದನ ಪಡೆಯಲು ಆಕೆಗೆ ಡಾಕ್ಟರ್ ಸಹಾಯದಿಂದ ಹೆಚ್‍ಐವಿ (HIV) ಸೋಂಕಿತ ರಕ್ತ ಇಂಜೆಕ್ಷನ್ ಕೊಡಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದೆ.
ಎಂ. ಚರಣ್ (40) ಬಂಧಿತ ವ್ಯಕ್ತಿ. ಚರಣ್ ಮದುವೆ ಆಗಿ ಕೆಲವರ್ಷಗಳ ಕಾಲ ತನ್ನ ಪತ್ನಿಯೊಂದಿಗೆ ಸಂತೋಷದಿಂದ ಇದ್ದ. ದಂಪತಿಗೆ ಒಬ್ಬಳು ಮಗಳು ಇದ್ದಾಳೆ. ಆದರೆ 2018ರಲ್ಲಿ ಚರಣ್ ವರದಕ್ಷಿಣೆಗಾಗಿ ಹಾಗೂ ಗಂಡು ಮಗುವನ್ನು ಹೆರುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೇ ವಿಶಾಖಪಟ್ಟಣಂನ 21 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದೆ.
ಈ ಎಲ್ಲಾ ಕಾರಣದಿಂದಾಗಿ ಆರೋಪಿ ಚರಣ್ ತನ್ನ ಪತ್ನಿ ಬಳಿ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ಆಕೆಯನ್ನು ಹೆಲ್ತ್ ಚೆಕಪ್‍ಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರ ಸಹಾಯದಿಂದ ಹೆಚ್‍ಐವಿ ಸೋಂಕಿತ ರಕ್ತ ಇಂಜೆಕ್ಷನ್ ಕೊಡಿಸಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜಾತಿ ಆಧಾರದಲ್ಲಿ ಸಿಎಂ ಆಯ್ಕೆ ಮಾಡಲ್ಲ- ಜಿ.ಪರಮೇಶ್ವರ್
ಇತ್ತೀಚೆಗೆ ಚರಣ್ ಪತ್ನಿ ಆಸ್ಪತ್ರೆಗೆ ಹೋದಾಗ ಆಕೆಗೆ ಹೆಚ್‍ಐವಿ ಇರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ಆಕೆ ಚರಣ್‍ನನ್ನು ಪ್ರಶ್ನಿಸಿದಾಗ, ಗರ್ಭಾವಸ್ಥೆಯಲ್ಲಿ ಹೆಚ್‍ಐವಿ ಸಂಪರ್ಕಿಸಿರಬಹುದು ಎಂದು ಚರಣ್ ತಿಳಿಸಿದ್ದಾನೆ. ಇದಾದ ಬಳಿಕ ಘಟನೆಗೆ ಸಂಬಂಧಿಸಿ ತಾಡಪಲ್ಲಿ ಪೊಲೀಸರಿಗೆ ಪತಿ ಚರಣ್ ವಿರುದ್ಧ ದೂರು ದಾಖಲಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಚರಣ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಫ್ಲೈಟ್‌ನಲ್ಲಿ ನಾಯಿಯನ್ನು ಬಿಡದ ಪೈಲೆಟ್ – ಕ್ಯಾನ್ಸಲ್ ಆಯ್ತು 12 ದಿನದ ಟ್ರಿಪ್