ಬೇರೆ ಮಹಿಳೆ ಜೊತೆ ಓಡಾಟ – ಟ್ರಾಫಿಕ್ ಕ್ಯಾಮೆರಾದಿಂದ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ

Public TV
1 Min Read
Traffic Camera

ತಿರುವನಂತಪುರಂ: ಬೇರೆ ಮಹಿಳೆಯೊಂದಿಗೆ ಸುತ್ತಾಡಿದ್ದ ವ್ಯಕ್ತಿಯೊಬ್ಬ ನಿಯಮ ಉಲ್ಲಂಘಿಸಿ, ಟ್ರಾಫಿಕ್ ಕ್ಯಾಮೆರಾ (Traffic Camera) ಕಣ್ಣಿಗೆ ಸೆರೆಯಾಗಿ ಪತ್ನಿಯ (Wife) ಕೈಗೆ ಸಿಕ್ಕಿಬಿದ್ದ ಘಟನೆ ಕೇರಳದಲ್ಲಿ (Kerala) ನಡೆದಿದೆ.

ಇತ್ತೀಚೆಗೆ ಟ್ರಾಫಿಕ್ ಕ್ಯಾಮೆರಾಗಳು ಕ್ಯಾಮರಾಮ್ಯಾನ್‍ಗಿಂತ ಚೆನ್ನಾಗಿ ಫೋಟೋ ಕ್ಲಿಕ್ಕಿಸುತ್ತಿದ್ದು, ಇದನ್ನು ನೋಡಿದ ವಾಹನ ಸವಾರರು ದಂಡ ಕಟ್ಟಿದ್ರು ಪರ್ವಾಗಿಲ್ಲ ಫೋಟೋ ಚೆನ್ನಾಗಿದೆಯಲ್ಲ ಎಂದು ಹೇಳಿಕೊಳ್ಳುವಷ್ಟು ಚೆನ್ನಾಗಿರುತ್ತವೆ. ಆದರೆ ಈ ಕ್ಯಾಮೆರಾದ ಸ್ಪಷ್ಟತೆಯಿಂದ ಈಗ ಪತಿಯೊಬ್ಬ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ.

Traffic Camera 1

ಇಡುಕ್ಕಿ ಮೂಲದ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಗೆ ಡ್ರಾಪ್ ಕೊಟ್ಟಿದ್ದ. ಆದರೆ ಈ ವೇಳೆ ಮಹಿಳಾ ಸ್ನೇಹಿತೆ ಹೆಲ್ಮೆಟ್ ಧರಿಸದೇ ಪ್ರಯಾಣಿಸಿದ್ದಾಳೆ. ಇದರಿಂದಾಗಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಬೈಕ್ ಸವಾರ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದುರಾದೃಷ್ಟಕ್ಕೆ ಪತಿ ಓಡಿಸುತ್ತಿದ್ದ ಸ್ಕೂಟರ್‌ನ ನೋಂದಣಿ ಪ್ರಮಾಣ ಪತ್ರದ ಪ್ರಕಾರ ಪತ್ನಿಯೇ ವಾಹನದ ಮಾಲೀಕರಾಗಿದ್ದಳು. ಇದರಿಂದಾಗಿ ನಿಯಮ ಉಲ್ಲಂಘನೆಯ ವಿವರ ಹಾಗೂ ಪಾವತಿಸಬೇಕಾದ ದಂಡದ ವಿವರದ ಸಂದೇಶವು ಆಕೆಯ ಮೊಬೈಲ್ ಫೋನ್‍ಗೆ ಬಂದಿದೆ.

POLICE JEEP 1

ಈ ಮೊಬೈಲ್ ಸಂದೇಶವನ್ನು ನೋಡಿದ ಮಹಿಳೆಯು, ಫೋಟೋದಲ್ಲಿ ಕಾಣುವ ಮಹಿಳೆ ಯಾರು ಎಂದು ಪತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆ ವ್ಯಕ್ತಿಯು ಬೈಕ್‍ನಲ್ಲಿದ್ದ ಮಹಿಳೆಗೂ ನನಗೂ ಯಾವುದೇ ಸಂಬಂಧವಿಲ್ಲ. ಬದಲಿಗೆ ಲಿಫ್ಟ್ ನೀಡಿದ್ದೇನೆ ಎಂದು ಹೇಳಿದ್ದಾನೆ. ಈ ಮಾತನ್ನು ನಂಬಂದ ಪತ್ನಿಯ ಕೋಪಗೊಂಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ

ARREST

ಘಟನೆಗೆ ಸಂಬಂಧಿಸಿ ಮಹಿಳೆಯು ಕರಮಾನ ಪೊಲೀಸರಿಗೆ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾಳೆ. ದೂರಿನಲ್ಲಿ ತನಗೂ, ತನ್ನ 3 ವರ್ಷದ ಮಗಳ ಮೇಲೆ ಪತಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

Share This Article