ಭುವನೇಶ್ವರ: ಕಳೆದ ನಾಲ್ಕು ವರ್ಷಗಳಿಂದ ಸಂಬಳ ನೀಡದೇ ಕೆಲಸ ಮಾಡಿಸುತ್ತಿದ್ದ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಶಾಲಾ ಶಿಕ್ಷಕಿಯ ಪತಿ ಹಲ್ಲೆ ನಡೆಸಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಇದೀಗ ದೂರಿನ ಆಧಾರದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
Advertisement
ಬೆಳ್ಳಗುಂಟಾದ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿಲತಾ ಸಾಹು ಅವರು ತಮ್ಮ ವೇತನ ನೀಡುವಂತೆ ಒತ್ತಾಯಿಸಿ ನಾಲ್ಕು ತಿಂಗಳಿಂದ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದ ಡಿಇಒ ಅವರನ್ನು ದಂಪತಿ ಅಡ್ಡಗಟ್ಟಿ ಸಂಬಳ ಕೇಳಿದ್ದಾರೆ. ಇದನ್ನೂ ಓದಿ: ರಥೋತ್ಸವದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ದುರ್ಮರಣ
Advertisement
Advertisement
ಡಿಇಒ ಅವರೊಂದಿಗೆ ಶಾಂತಿಲತಾ ಸಾಹು ಅವರು ಮಾತನಾಡುತ್ತಿದ್ದಂತೆಯೇ, ಅವರ ಪತಿ ಅಧಿಕಾರಿಯ ಮುಖಕ್ಕೆ ಹೊಡೆದಿದ್ದಾರೆ. ನಂತರ ಈ ಕುರಿತಂತೆ ಡಿಇಒ ಅವರು ದೂರು ನೀಡಿದ್ದು, ಇಬ್ಬರನ್ನು ವ್ಯಾನ್‍ಗೆ ಕರೆದೊಯ್ಯುವಾಗ ಶಾಂತಿಲತಾ ಸಾಹು ತಮಗೆ ಸಂಬಳ ನೀಡುವುದನ್ನು ನಿಲ್ಲಿಸಿದ್ದಾರೆ. ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ನೀಡಲ್ಲ ಮತ್ತು ಕೆಲಸದಿಂದಲೂ ಅಮಾನತುಗೊಳಿಸಿಲ್ಲ ಎಂದು ಆರೋಪಿಸಿ ಗಳಗಳ ಅತ್ತಿದ್ದಾರೆ. ಇದನ್ನೂ ಓದಿ: ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ
Advertisement
ಈ ವಿಚಾರವಾಗಿ ಡಿಇಒ ಕಚೇರಿಯ ಅಧಿಕಾರಿಯೊಬ್ಬರು ಸಂಬಳ ಕೇಳಿದಾಗಲಿಂದಲೂ ಶಾಂತಿಲತಾ ಸಾಹು ಕೆಲಸಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದೀಗ ಈ ಸಂಬಂದ ತನಿಖೆ ನಡೆಸಲಾಗುತ್ತಿದೆ ಎಂದು ಬೆರ್ಹಾಂಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಬಿಷ್ಣು ಪ್ರಸಾದ್ ಪತಿ ತಿಳಿಸಿದ್ದಾರೆ.