ಅಗರ್ತಲಾ: ಮಕ್ಕಳ ಕಳ್ಳರು ಎಂದು ತಿಳಿದು ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಒಬ್ಬರು ಸದಸ್ಯರು ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದ ಘಟನೆ ತ್ರಿಪುರದಲ್ಲಿ ನಡೆದಿದೆ.
ಸುಕಾಂತ್ ಚಕ್ರವರ್ತಿ(33) ಕೊಲೆಯಾದ ವ್ಯಕ್ತಿ. ಸುಕಾಂತ್‍ರನ್ನು ಮಕ್ಕಳು ಕಳ್ಳ ಎಂದು ಭಾವಿಸಿದ ಗ್ರಾಮದ ಜನರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಮೃತಿ ರಂಜನ್ ದಾಸ್ ತಿಳಿಸಿದ್ದಾರೆ.
Advertisement
ಸುಕಾಂತ್ ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಸದಸ್ಯರಾಗಿದ್ದು, ಮಕ್ಕಳ ಕಳ್ಳರು ವದಂತಿ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುಲು ಅಭಿಯಾನವನ್ನು ಆಯೋಜಿಸಲಾಗಿತ್ತು. ಸ್ಥಳೀಯರಿಗೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಯೇ ಕೊಲೆಯಾಗಿದ್ದಾರೆ.
Advertisement
ಸುಕಾಂತ್ ಜನಸಂದಣಿ ಪ್ರದೇಶಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮಕ್ಕಳ ಕಳ್ಳರ ಜಾಗೃತಿಯ ಬಗ್ಗೆ ಅಭಿಯಾನ ನಡೆಸುತ್ತಿದ್ದರು. ಆಗ ಗ್ರಾಮಸ್ಥರು ಇವರೇ ಮಕ್ಕಳ ಕಳ್ಳ ಎಂದು ತಿಳಿದು ಅವರನ್ನು ಹೊಡೆದು ಕೊಂದಿದ್ದಾರೆ. ಅಲ್ಲದೇ ಸುಕಾಂತ್ ಜೊತೆಯಲ್ಲಿದ್ದ ಇಬ್ಬರ ಮೇಲೆಯೂ ಹಲ್ಲೆ ನಡೆಸಿ ಅಧಿಕಾರಿಗಳ ವಾಹನವನ್ನು ಜಖಂಗೊಳಿಸಿದ್ದಾರೆ. ಜನರಿಗೆ ಒಳ್ಳೆಯದಾಗಲು ಸರ್ಕಾರದವರೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಮೂವರು ಹೇಳಿದರು ಅವರ ಮಾತನ್ನು ಕೇಳದೇ ಗ್ರಾಮಸ್ಥರು ದಾಳಿ ನಡೆಸಿದ್ದಾರೆ.
Advertisement
ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ನಡೆದ ನಂತರ ತ್ರಿಪುರಾ ಮುಖ್ಯಮಂತ್ರಿ ಬಿಪ್‍ಲಾಬ್ ಕುಮಾರ್ ದೇಬ್ ಜನರಲ್ಲಿ ಯಾವುದೇ ವದಂತಿಗೆ ಕಿವಿ ಕೊಡದೇ ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಗುರುವಾರದಿಂದ 48 ಗಂಟೆ ಎಸ್‍ಎಂಎಸ್ ಹಾಗೂ ಇಂಟರ್ ನೆಟ್ ಸ್ಥಗಿತಗೊಳಿಸಿದ್ದಾರೆ.