ಲಕ್ನೋ: ವಿಗ್‍ನಲ್ಲಿ ವೈರ್ ಲೆಸ್ ಬ್ಲೂಟೂತ್ ಇಟ್ಟುಕೊಂಡು ಪೊಲೀಸ್ ಪರಿಕ್ಷೆಯಲ್ಲಿ ಕಾಪಿ ಹೊಡೆಯಲು ಹೋಗಿ ಸಿಕ್ಕಿ ಬಿದ್ದ ಅಭ್ಯರ್ಥಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
#UttarPradesh mein Sub-Inspector
की EXAM mein #CHEATING #nakal के शानदार जुगाड़ ☺️☺️????????????@ipsvijrk @ipskabra @arunbothra@renukamishra67@Uppolice well done pic.twitter.com/t8BbW8gBry
— Rupin Sharma IPS (@rupin1992) December 21, 2021
Advertisement
ಐಪಿಎಸ್ ಅಧಿಕಾರಿ ರೂಪಿನ ಶರ್ಮಾ ಅವರು ಟ್ವಿಟ್ಟರ್‍ನಲ್ಲಿ ಈ ವೀಡಿಯೋವನ್ನು ಹರಿಬಿಟ್ಟಿದ್ದಾರೆ. ಈ ವೀಡಿಯೋದಲ್ಲಿ ಅಭ್ಯರ್ಥಿ ವಿಗ್‍ನಲ್ಲಿ ಸೂಕ್ಷ್ಮವಾದ ಎರಡು ತಂತಿಗಳನ್ನು ಜೋಡಿಸಿಲಾದ ಇಯರ್ ಫೋನ್ಗಳಿದ್ದು, ಈ ಇಯರ್ ಫೋನ್ಸ್ ತಂತಿಗಳಿಗೆ ಬ್ಲೂ ಟೂತ್ ಸಾಧನವನ್ನು ಜೋಡಿಸಲಾಗಿದೆ. ಮೆಟಲ್ ಡಿಟೆಕ್ಟರ್‍ಗಳ ಮೂಲಕ ತಪಾಸಣೆ ನಡೆಸಿದ ಪೊಲೀಸರು ವಿದ್ಯಾರ್ಥಿಯನ್ನು ಹಿಡಿದಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ – ಪೊಲೀಸ್ ಅಧಿಕಾರಿ, ನಾಗರಿಕ ಹತ್ಯೆ
Advertisement
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಹಿಂದೆ ಚೀನಾದಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ ಸಾಧನಗಳನ್ನು ಬಳಸಿ ಕಾಪಿ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ಭಾರತದಲ್ಲೂ ಪರೀಕ್ಷೆ ವೇಳೆ ಅಭ್ಯರ್ಥಿಗಳು ಡಿವೈಸ್ ಬಳಸಿ ಕಾಪಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ