ಜೈಪುರ: ಮದುವೆಯಾಗುವುದಾಗಿ ನಂಬಿಸಿ ಹಲವಾರು ಮಹಿಳೆಯರ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿರುವುದಾಗಿ ಘಟನೆ ರಾಜಸ್ಥಾನದ (Rajasthan) ಸಿಕಾರ್ (Sikar) ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಸಂದೀಪ್ ಗೋದಾರ ಎಂದು ಗುರುತಿಸಲಾಗಿದ್ದು, ವಿಚ್ಛೇದಿತ, ಅಂಗವಿಕಲ ಮತ್ತು ಒಂಟಿ ಮಹಿಳೆಯರನ್ನೆ ಟಾರ್ಗೆಟ್ ಮಾಡಿಕೊಂಡು ಅತ್ಯಾಚಾರ ವೆಸಗಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಆದರೀಗ ಈತನ ವಿರುದ್ಧ ಸಿಕರ್‍ನ ವಿವಾಹಿತ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಮದುವೆಯಾಗುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿ ನಂತರ ತನನ್ ಅಶ್ಲೀಲ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಕ್ಲಿಕ್ಕಿಸಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಹಿಂಸಾಚಾರ – ಬಿಜೆಪಿ ರಾಜ್ಯಾಧ್ಯಕ್ಷನ ಬಂಧನ
ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ, ಮದುವೆಯಾಗುವ ನೆಪದಲ್ಲಿ ಅನೇಕ ಮಹಿಳೆಯರಿಗೆ ಆರೋಪಿ ಶೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆಯೊಬ್ಬರು ಫೇಸ್‍ಬುಕ್ ಮೂಲಕ ಆರೋಪಿ ಜೊತೆ ಸ್ನೇಹ ಬೆಳೆಸಿದ್ದೆ. ಶೀಘ್ರದಲ್ಲೇ ನಾವಿಬ್ಬರು ಮದುವೆಯಾಗೋಣ ಎಂದು ಇಬ್ಬರು ಮಾತನಾಡಿಕೊಂಡಿದ್ದೇವು. ಅಷ್ಟೇ ಅಲ್ಲದೇ ಮದುವೆಗೂ ಮುನ್ನವೇ ತನ್ನ ಆಧಾರ್ ಕಾರ್ಡ್ ಮೇಲೆ ಆರೋಪಿ ಮಹಿಳೆಯ ಪತಿ ಎಂದು ಬರೆಸಿಕೊಂಡಿದ್ದನು ಎಂದು ತಿಳಿಸಿದ್ದಾರೆ.
ಮದುವೆ ವಿಚಾರವಾಗಿ ಕೇಳಿದಾಗಲೆಲ್ಲ ಸಂದೀಪ್ ತನ್ನ ಆಧಾರ್ ಕಾರ್ಡ್‍ನಲ್ಲಿ ಆಕೆಯ ಪತಿ ಎಂದು ಹೆಸರನ್ನು ಬರೆಸಿಕೊಂಡಿರುವುದನ್ನು ತೋರಿಸಿ ನಂಬಿಕೆಯನ್ನು ಗಳಿಸುತ್ತಿದ್ದನು. ಇದರಿಂದ ನಿಜವಾಗಿಯೂ ತನ್ನ ವಿಚಾರವನ್ನು ಆರೋಪಿ ಗಂಭೀರವಾಗಿ ತೆಗೆದುಕೊಂಡಿದ್ದಾನೆ ಎಂದು ಮಹಿಳೆ ಆತನ ಬಲೆಗೆ ಬಿದ್ದಿದ್ದಾಳೆ. ಇದನ್ನೂ ಓದಿ: ಕ್ಷುಲ್ಲಕ ವಿಷಯಕ್ಕೆ ಗಲಾಟೆ – ಪತ್ನಿಯ ಕತ್ತು ಸೀಳಿದ 78ರ ವೃದ್ಧ
ಆರೋಪಿಯು ಸಂತ್ರಸ್ತೆಯ ಅಶ್ಲೀಲ ವೀಡಿಯೋಗಳನ್ನು ಕ್ಲಿಕ್ಕಿಸಿಕೊಂಡಿದ್ದರಿಂದ ಸಂತ್ರಸ್ತೆ ಆತನಿಂದ ದೂರವಾಗಲು ಯತ್ನಿಸಿದ್ದಾಳೆ. ಈ ವೇಳೆ ಆಕೆಯ ಅಶ್ಲೀಲ ಫೋಟೋಗಳು ಮತ್ತು ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಆರೋಪಿ ಬ್ಲಾಕ್ ಮೇಲ್ ಮಾಡಿದ್ದಾನೆ. ಸದ್ಯ ಮಹಿಳೆ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜೈಪುರದ ಚೌಮು ಪುಲಿಯಾದಲ್ಲಿರುವ ಮಾಲ್‍ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಕೃತ್ಯದ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚುತ್ತಿದ್ದಾರೆ.