ನವದೆಹಲಿ: ಎಲೆಕ್ಟ್ರಿಕ್ ಬೈಕ್ ಇಷ್ಟಪಡೋರಿಗೆ ಒಂದು ಗುಡ್ ನ್ಯೂಸ್. ಜಾರ್ಜ್ ಖಾಲಿಯಾಗಿ ನಡು ರೋಡ್ ನಲ್ಲಿ ಇನ್ಮುಂದೆ ಬೈಕ್ ನಿಲ್ಲೋದಿಲ್ಲ ಯಾಕೆಂದರೆ ಆಟೋ ರಿಚಾರ್ಜ್ ಬೈಕ್ ಒಂದು ಅನ್ವೇಷಣೆ ಆಗಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಮಹೇಶ್ ಮಹಾಜನ್ ಎಂಬವರು ಈ ಬೈಕನ್ನು ಅನ್ವೇಷಣೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಈಗಿರುವ ಎಲೆಕ್ಟ್ರಿಕ್ ಬೈಕ್ ಗಳಿಗಿಂತ ಇದು ಭಿನ್ನ. ಈಗಿರುವ ಬೈಕ್ ಗಳು ಮನೆಯಲ್ಲಿ ವಿದ್ಯುತ್ ನಿಂದ ಪ್ರತಿ ದಿನ ಚಾರ್ಜ್ ಮಾಡಿ ಓಡಿಸಬೇಕು. ಆದರೆ ಮಹಾಜನ್ ರೆಡಿ ಮಾಡಿರೋ ಈ ಬೈಕ್ ಆಟೋ ರಿಚಾರ್ಜ್ ಆಗುತ್ತೆ. ಪ್ರತಿದಿನ ನೀವೂ ಬೈಕ್ ಓಡಿಸುತ್ತಿದ್ದರೆ ಆಟೋ ರಿಜಾರ್ಜ್ ಆಗುತ್ತೆ ಹಾಗಾಗೀ ಹೆಚ್ಚು ವಿದ್ಯುತ್ ಬಳಕೆ ಮಾಡೋ ಅವಶ್ಯಕತೆ ಇಲ್ಲ.
Advertisement
26,000 ಎಂಪೇರ್ ಬ್ಯಾಟರಿ ಈ ಬೈಕ್ ಗೆ ಅವಳಡಿಸಿದ್ದು ಬ್ಯಾಟರಿ ಪೂರ್ಣ ಖಾಲಿಯಾದ್ರೆ ಮಾತ್ರ ವಿದ್ಯುತ್ ನಿಂದ ರಿಚಾರ್ಜ್ ಮಾಡಬೇಕು. ಅದನ್ನು ಹೊರತು ಪಡಿಸಿದರೆ ಆಟೋ ರಿಜಾರ್ಜ್ ಮೂಲಕ ನಿಮ್ಮ ಪ್ರಯಾಣ ಆರಾಮಾದಾಯಕವಾಗಿ ಸಾಗುತ್ತದೆ. ಹೆಚ್ಚು ವಿದ್ಯುತ್ ಖರ್ಚು ಮಾಡಬೇಕು, ಜಾರ್ಜ್ ಖಾಲಿಯಾದ್ರೆ ನಡು ರೋಡ್ ನಲ್ಲಿ ಬೈಕ್ ನಿಲ್ಲುತ್ತೆ ಎಂಬ ಚಿಂತೆಯೇ ಇರುವುದಿಲ್ಲ.
Advertisement
ಈಗ ಅನ್ವೇಷಣೆಯಾಗಿರೊ ಈ ಬೈಕ್ ನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಅಭಿವೃದ್ಧಿಗೊಳಿಸಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ. ನವದೆಹಲಿಯ ತಮ್ಮ ನಿವಾಸದಲ್ಲಿ ಬೈಕ್ ನೋಡಿದ ಗಡ್ಕರಿ ತಜ್ಞರ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಸಲಹೆ ನೀಡಿದ್ದು ಬೈಕ್ ಮೇಕ್ ಇನ್ ಇಂಡಿಯಾ ಯೋಜನೆಗೆ ಸೇರಿಸಲು ಸಂಸದ ಸುರೇಶ್ ಅಂಗಡಿ ಸಹಾಯ ಮಾಡುತ್ತಿದ್ದಾರೆ.
Advertisement
ಒಟ್ಟಿನಲ್ಲಿ ಈ ಬೈಕ್ ಬೇಗ ಮಾರುಕಟ್ಟೆಗೆ ಬಂದರೆ ವಿದ್ಯುತ್ ಹೆಚ್ಚು ಖರ್ಚಾಗುತ್ತೆ, ಜಾರ್ಜ್ ಖಾಲಿಯಾದ್ರೆ ಬೈಕ್ ನಡು ರೋಡ್ ನಲ್ಲಿ ನಿಲ್ಲುತ್ತೆ ಅನ್ನೊ ಸಮಸ್ಯೆ ಇರಲ್ಲ.