ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ (Microfinance) ಸೇರಿದಂತೆ ವಿವಿಧ ಕಡೆ ಟ್ರ್ಯಾಕ್ಟರ್, ಬೈಕ್ ಹಾಗೂ ಮೊಬೈಲ್‌ಗೆ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊರ್ವ ಸಾಲಭಾದೆಯಿಂದ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 26 ವರ್ಷದ ಗಿರೀಶ್ ಎಂಬಾತ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ತಡರಾತ್ರಿ ಮನೆಯಿಂದ ತೋಟದ ಕಡೆ ಹೋಗಿದ್ದವ ಮಧ್ಯರಾತ್ರಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಎದ್ದು ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಿಲಯನ್ಸ್ ಬ್ರ‍್ಯಾಂಡ್ಸ್ ಸಹಯೋಗದೊಂದಿಗೆ ಮಾಝ್‌ನಿಂದ ಭಾರತದಲ್ಲಿ ಮೊದಲ ಮಳಿಗೆ ಶುರು
Advertisement
ಕಳೆದ 1 ವರ್ಷದ ಹಿಂದೆ ಸಹ ಕೃಷಿಕಾಯಕಕ್ಕೆ ಲೋನ್ ಮಾಡಿ ತಗೊಂಡಿದ್ದ ಟ್ರಾಕ್ಟರನ್ನ ಸಹ ಜಫ್ತಿ ಮಾಡಲಾಗಿತ್ತಂತೆ, ಇನ್ನೂ ಲೋನ್ ಮೇಲೆ ತಗೊಂಡಿದ್ದ ಬೈಕ್ ಕಂತು ಸಹ ಕಟ್ಟಲು ಕಷ್ಟವಾಗಿದ್ದು, ಹೆಂಡತಿ ಹಾಗೂ ತಾಯಿಯ ಹೆಸರಲ್ಲಿ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಮಾಡಿಕೊಂಡಿದ್ದ ಅಂತ ತಿಳಿದುಬಂದಿದೆ. ಇದನ್ನೂ ಓದಿ: ಸಿಎಂ ಸಲಹೆಗಾರ ಬಿ.ಆರ್ ಪಾಟೀಲ್ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ- ಪರಮೇಶ್ವರ್
Advertisement
Advertisement
ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುಪಿಎಗೆ ಹೋಲಿಸಿದ್ರೆ ಕರ್ನಾಟಕಕ್ಕೆ 9 ಪಟ್ಟು ಅಧಿಕ ಅನುದಾನ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್