ಬೀಜಿಂಗ್: 23 ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ವ್ಯಕ್ತಿಯೊಬ್ಬರು ಸಿನಿಮೀಯ ರೀತಿಯಲ್ಲಿ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
Advertisement
ಚೀನಾದ ಚೊಂಗ್‍ಕಿಂಗ್ ನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ 23 ಅಂತಸ್ತಿನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೇಲಂತಸ್ತಿನಲ್ಲಿದ್ದ ವ್ಯಕ್ತಿ ತನ್ನ ಪ್ರಾಣ ಉಳಿಸಿಕೊಳ್ಳಲು ಕಟ್ಟಡದ ಹೊರಗೆ ಬಂದು ಕಂಬಿಯನ್ನ ಹಿಡಿದುಕೊಂಡೇ ಕೆಲ ಕಾಲ ಪರದಾಡಿದ್ದಾರೆ.
Advertisement
Advertisement
ಈ ವೇಳೆ ಮೇಲಿಂದ ಬೆಂಕಿಯ ಕಿಡಿಗಳೂ ಸಹ ಬೀಳೋದನ್ನ ವಿಡಿಯೋದಲ್ಲಿ ಕಣಬಹುದು. ಆದರೂ ಆ ವ್ಯಕ್ತಿ ಎದೆಗುಂದದೆ ಕಿಟಕಿ ಗಾಜನ್ನ ಕಾಲಿನಿಂದ ಒದ್ದು ಅದನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಈ ಎಲ್ಲಾ ದೃಶ್ಯವನ್ನ ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
Advertisement
ವರದಿಯ ಪ್ರಕಾರ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿದ್ದು, ಗಾಜು ಒಡೆದು ಆ ವ್ಯಕ್ತಿಯನ್ನ ಒಳಗೆ ಎಳೆದುಕೊಂಡಿದ್ದಾರೆ. ಆ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಕಳಿಸಲಾಯ್ತು ಎಂದು ವರದಿಯಾಗಿದೆ.
https://www.youtube.com/watch?v=RFDS-E-FHsE