– ನಾನು ಅವಳನ್ನು ತುಂಬಾ ಪ್ರೀತಿ ಮಾಡುತ್ತೇನೆ
ಮುಂಬೈ: ಪ್ರೀತಿಸಿದ ಯುವತಿ ಮೋಸ ಮಾಡಿದಳು ಎಂದು ಹೇರ್ ಸ್ಟುಡಿಯೋ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಶೋಬಿತ್ ಸಿಂಗ್ ಮೃತ ಯುವಕ. ಈ ಘಟನೆ ಏಪ್ರಿಲ್ 30 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಥೆರಾನ್ ಬೆಟ್ಟದಲ್ಲಿ ಸಿಂಗ್ ಮೃತ ದೇಹದ ಪತ್ತೆಯಾಗಿದ್ದು, ಇದೀಗ ಅಂಬೋಲಿ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಏನಿದು ಪ್ರಕರಣ?
ಶೋಬಿತ್ ಏಪ್ರಿಲ್ 13 ರಂದು ಕಾಣೆಯಾಗಿದ್ದನು. ಅದೇ ದಿನ ಸಿಂಗ್ ಸ್ನೇಹಿತ ಪಂಕಜ್ ಚೌಹಾಣ್‍ಗೆ ಆತ್ಮಹತ್ಯೆಯ ಮೆಸೇಜ್ ಮಾಡಿದ್ದನು. ತಕ್ಷಣ ಸಿಂಗ್ ಸಹೋದ್ಯೋಗಿ ಮಿಖೈಲ್ ಚಂದ್ರಮಣಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಮೆಸೇಜ್‍ನಲ್ಲಿ ಸಿಂಗ್, ತನ್ನ ಪ್ರೇಯಸಿ ಮತ್ತು ಇನ್ನಿತರ ಇಬ್ಬರು ವ್ಯಕ್ತಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಪ್ರಕರಣವನ್ನು ದಾಖಲಿಸುವುದಾಗಿ ಬೆದರಿಕೆವೊಡ್ಡುತ್ತಿದ್ದಾರೆ ಎಂದು ತನ್ನ ನೋವನ್ನು ತೋಡಿಕೊಂಡಿದ್ದ.
Advertisement
ಸ್ನೇಹಿತ ಪಂಕಂಜ್‍ನಿಂದ ಮೆಸೇಜ್ ಬಂದ ಬಳಿಕ ನಾವು ತಕ್ಷಣ ಅಂಬೋಲಿ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ತಿಳಿಸಿದೆವು. ಅವರು ಕೂಡ ಇತರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಶೋಧಕಾರ್ಯವನ್ನು ಶುರು ಮಾಡಿದ್ದರು. ಅವನು ಮಾಡಿದ ಇನ್‍ಸ್ಟಾಗ್ರಾಂ ಮೂಲಕ ಸ್ಥಳವನ್ನು ಟ್ರೇಸ್ ಮಾಡಿ ತಕ್ಷಣ ಅಲ್ಲಿಗೆ ಹೋದೆವು. ಆದರೆ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಚಂದ್ರಮಣಿ ಹೇಳಿದ್ದಾರೆ.
Advertisement
ಸ್ವಲ್ಪ ದಿನದ ನಂತರ ಏಪ್ರಿಲ್ 23 ರಂದು ಪೋಲಿಸರು ಫೋನ್ ಮಾಡಿ ಅದೇ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ ಎಂದು ನಮ್ಮನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಆತನೇ ಶೋಬಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತನ ಸಾವಿಗೆ ಗೆಳತಿ ಮತ್ತು ಅವಳ ಸ್ನೇಹಿತರು ಕಾರಣರಾಗಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಸಾಕ್ಷ್ಯಾಧಾರವಿದ್ದರೂ ಪೊಲೀಸರು ಎಫ್‍ಐಆರ್ ದಾಖಲಿಸಲು ಒಂದು ವಾರ ತಡಮಾಡಿದರೂ ಎಂದು ಚಂದ್ರಮಣಿ ಆರೋಪಿಸಿದ್ದಾರೆ.
Advertisement
ಡೆತ್‍ನೋಟ್‍ನಲ್ಲಿ ಏನಿದೆ?
ನನ್ನ ಪ್ರೇಯಸಿ ಬೇರೊಬ್ಬ ಹುಡುಗನೊಂದಿಗೆ ಸುತ್ತಾಡುತ್ತಿದ್ದು, ಆತನ ಜೊತೆ ಸಂಬಂಧ ಹೊಂದಿದ್ದಳು. ಇದನ್ನು ನೋಡಿದ ನಾನು ನಿಮ್ಮ ಪೋಷಕರಿಗೆ ತಿಳಿಸುವುದಾಗಿ ಹೇಳಿದೆ. ಆಗ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ನನ್ನ ಮೇಲೆ ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಬೆದರಿಕೆವೊಡ್ಡಿದರು ಎಂದು ಬರೆದಿದ್ದಾನೆ. ಇನ್ನೂ ಮೃತ ದೇಹದ ಪಕ್ಕದಲ್ಲಿ ಪತ್ರವೊಂದು ಸಿಕ್ಕಿದೆ. ಅದರಲ್ಲಿ “ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಂಪೂರ್ಣ ಬದುಕನ್ನು ಅವಳೊಂದಿಗೆ ಜೀವಿಸಲು ಇಷ್ಟಪಟ್ಟಿದ್ದೆ. ಆದರೆ ಅದು ಈಗ ಅಸಾಧ್ಯವೆಂದು ತಿಳಿಯಿತು. ಹೀಗಾಗಿ ನಾನು ಶಾಶ್ವತವಾಗಿ ಹೋಗುತ್ತೇನೆ ಕ್ಷಮಿಸಿ..” ಎಂದು ಶೋಬಿತ್ ಬರೆದಿದ್ದಾನೆ.
ಸದ್ಯಕ್ಕೆ ಆತನ ಪ್ರೇಯಸಿ ಮತ್ತು ಆಕೆಯ ಸ್ನೇಹಿತರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಭರತ್ ಗಾಯಕ್‍ವಾಡ್ ಹೇಳಿದ್ದಾರೆ.