ನವದೆಹಲಿ: ನಿತ್ಯ ಸಾಮಾನ್ಯ ರೈಲುಗಳಲ್ಲಿ (Railway) ಪ್ರಯಾಣಿಸುವಾಗ ಹಳಿಗಳ ಮೇಲಿನ ಶಬ್ಧ, ನೂಕಾಟದ ಗದ್ದಲ, ದೀರ್ಘ ಸಮಯದವರೆಗೆ ದಣಿದ ಪ್ರಯಾಣ ಎಲ್ಲ ರೀತಿಯ ಅನುಭವವೂ ಆಗುತ್ತದೆ. ಹಾಗಾಗಿಯೇ ಭಾರತೀಯ ರೈಲ್ವೆ ಇಲಾಖೆಯೂ (Indian Railway) ಪ್ರಯಾಣಿಕರ ಅನುಕೂಲಗಳಿಗೆ ತಕ್ಕಂತೆ ವಿಶೇಷ ರೈಲುಗಳ (Speical Train) ಕಡೆಗೆ ಹೆಚ್ಚಿನ ಒಲವು ತೋರುತ್ತಿದೆ.
View this post on Instagram
ಈಗಾಗಲೇ ಎಸಿ ಕೋಚ್‌ಗಳಿಗೆ ಹಾಸಿಗೆ ವ್ಯವಸ್ಥೆಗಳ ಸೌಲಭ್ಯ ಕಲ್ಪಿಸಿದೆ. ಜೊತೆಗೆ ಪ್ರಯಾಣ ಸುಲಭವಾಗಿಸಲು ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನೂ ಅನುಷ್ಠಾನಕ್ಕೆ ತಂದಿದೆ. ಇದೀಗ ಲಕ್ಷ-ಲಕ್ಷ ಹಣ ಕೊಟ್ಟು ಮಹಾರಾಜನಂತೆ ಪ್ರಯಾಣಿಕರು ಪ್ರವಾಸ ಕೈಗೊಳ್ಳುವ ಅವಕಾಶ ರೈಲ್ವೆ ಇಲಾಖೆ ಕಲ್ಪಿಸಿದೆ. ಅದಕ್ಕಾಗಿ ಮಹಾರಾಜ ಎಕ್ಸ್‌ಪ್ರೆಸ್ ವಿಶೇಷ ರೈಲು (Maharajas Express) ಸೇವೆಯನ್ನು ಜಾರಿಗೊಳಿಸಿದೆ. ಇದನ್ನೂ ಓದಿ: ಇನ್ಮುಂದೆ ಎಸಿ ರೈಲು ಕೋಚ್‌ಗಳಿಗೆ ವಿಶೇಷ ಸೌಲಭ್ಯ – ಸೆ.20ರಿಂದಲೇ ಜಾರಿ
ಹೌದು.. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನಿರ್ವಹಿಸುವ ಮಹಾರಾe ಎಕ್ಸ್‌ಪ್ರೆಸ್ ರೈಲು ಅತ್ಯಂತ ಐಷಾರಾಮಿ ಅನುಭವವನ್ನು ನೀಡುತ್ತದೆ. ಬರುವ ಅತಿಥಿಗಳಿಗೆ ಸ್ವರ್ಗ ಲೋಕವನ್ನೇ ತೆರೆದಿರುತ್ತದೆ. ದಿ ಇಂಡಿಯನ್ ಪನೋರೋಮಾ, ಟ್ರೆಷರ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಸ್ಪ್ಲೆಂಡರ್ ಮತ್ತು ದಿ ಹೆರಿಟೇಜ್ ಆಫ್ ಇಂಡಿಯಾ ನಾಲ್ಕು ವಿಭಾಗಗಳಲ್ಲಿ ಈ ಐಷಾರಾಮಿ ರೈಲು ಸಂಚರಿಸಲಿದ್ದು, ಪ್ರಯಾಣಿಕರು ಯಾವುದಾರೂ ಒಂದನ್ನು ಆಯ್ಕೆ ಮಾಡಿಕೊಂಡು 7 ದಿನಗಳ ಪ್ರವಾಸ ಮಾಡಬಹುದಾಗಿದೆ. ಅತ್ಯಾಧುನಿಕ ಸೇವೆಗಳೂ ಇದರಲ್ಲಿ ಲಭ್ಯವಿರಲಿದೆ. ಆದ್ರೆ ಒಬ್ಬರಿಗೆ ಟಿಕೆಟ್ ದರ 19 ಲಕ್ಷ ರೂ. ಇರಲಿದೆ (GST ಸೇರಿ 19,90,800 ರೂ.) ಎಂದು ಐಆರ್‌ಸಿಟಿಸಿ ಹೇಳಿದೆ.
ವಿಶೇಷತೆ ಏನಿದೆ?
ಒಂದು ಕೋಚ್‌ನಲ್ಲಿ ಡೈನಿಂಗ್ ಹಾಲ್, ಸ್ನಾನಗೃಹ ಹಾಗೂ ಎರಡು ಐಷಾರಾಮಿ ಬೆಡ್‌ರೂಮ್‌ಗಳು, ಎರಡು ದೊಡ್ಡ ಕಿಟಕಿಗಳು ಇರಲಿವೆ. ಪ್ರತಿ ಪ್ಯಾಸೆಂಜರ್‌ಗೂ ಪ್ರತ್ಯೇಕ ಬಟ್ಲರ್‌ಗಳ ಸೇವೆಗೆ ಮೀಸಲಾಗಿರುತ್ತದೆ. ಮಿನಿ ಬಾರ್, ಎಸಿ ಹಾಗೂ ವೈ-ಫೈ ಸೌಲಭ್ಯ, ಇಂಟರ್‌ನೆಟ್, ಟಿವಿ ಹಾಗೂ ತಮ್ಮಿಷ್ಟದ ಸಿನಿಮಾಗಳನ್ನು ನೋಡಲು ಡಿವಿಡಿ ಪ್ಲೇಯರ್‌ಗಳ ಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ. ಇದು ಭಾರತೀಯ ರೈಲ್ವೆಯಲ್ಲೇ ಅತ್ಯಂತ ದುಬಾರಿ ಟಿಕೆಟ್ ಕೋಚ್ ಆಗಿದೆ. ಇದನ್ನೂ ಓದಿ: ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು – ವಿಶೇಷ ರೈಲುಗಳು ಓಡುತ್ತೆ
ಜಾಲತಾಣದಲ್ಲಿ ಬಳಕೆದಾರರೊಬ್ಬರು ಮಹಾರಾಜ ಎಕ್ಸ್‌ಪ್ರೆಸ್ ರೈಲಿನ ವಿಶೇಷತೆಯ ವೀಡಿಯೋ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೆಯೇ ಟೀಕೆಗಳೂ ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಾನು ಆ ದರದಲ್ಲಿ ಆಸ್ತಿಯನ್ನೇ ಖರೀದಿಸುತ್ತೇನೆ ಅಂದಿದ್ದಾರೆ. ಮತ್ತೊಬ್ಬರು ಈ ಮೊತ್ತದಲ್ಲಿ ನಾನು ನ್ಯೂಯಾರ್ಕ್ ನಗರ ಅಥವಾ ವಿದೇಶದಲ್ಲಿ ಯಾವುದೇ ದೇಶಕ್ಕೆ ಭೇಟಿ ನೀಡಬಹುದು. ಅದರ ಹೊರತಾಗಿಯೂ ಹಣ ಉಳಿಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.