ಚಿಕ್ಕೋಡಿ: ಆಸ್ತಿಗಾಗಿ ಒಡಹುಟ್ಟಿದ ತಮ್ಮನನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪ್ರಕರಣ ಬೆಳಗಾವಿಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯ (Belagavi) ಸುಲ್ತಾನಪುರ ಗ್ರಾಮದ ಈರಪ್ಪ ಚೌಗಲಾ (24) ಹತ್ಯೆಗೀಡಾದ ದುರ್ದೈವಿ. ಕೇವಲ ಒಂದು ಎಕರೆ ಜಮೀನಿಗಾಗಿ ಈರಪ್ಪನನ್ನು ಆತನ ಸಹೋದರ ಶ್ರೀಶೈಲ್ ಚೌಗಲಾ ಕೊಲೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು
- Advertisement
ಜೂ.4ರ ಸಂಜೆ 9 ಗಂಟೆ ವೇಳೆಗೆ ತೋಟದ ಮನೆ ಕಡೆಗೆ ತೆರಳುವಾಗ ಕಾರ್‌ನಲ್ಲಿ ಬಂದ ದುಷ್ಕರ್ಮಿಗಳು ಈರಪ್ಪನನ್ನ ಅಪಹರಿಸಿದ್ದರು. ಬಳಿಕ ಬಾಗಲಕೋಟೆಯ (Bagalkote) ಕೋಲಾರ್ ಜಾಕ್ವೆಲ್ ಬಳಿ ಆತನನ್ನು ಹತ್ಯೆಗೈದು ಮೃತದೇಹವನ್ನು ಎಸೆದಿದ್ದರು.
- Advertisement
ಈರಪ್ಪನ ಅಪಹರಿಸಿ ಹತ್ಯೆಗೈದ 8 ಜನ ಆರೋಪಿಗಳನ್ನು ಹಾರೋಗೇರಿ ಪೊಲಿಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹತ್ಯೆಗೀಡಾದ ಈರಪ್ಪನ ಸಹೋದರನೇ ಸುಪಾರಿ ಕೊಟ್ಟಿರುವುದು ತಿಳಿದು ಬಂದಿದ್ದು, ಆತನನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಸಂಬಂಧ ಹಾರೂಗೇರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮಗು ಮಾರಾಟ ಜಾಲ ಕೇಸ್ – ತೋಟದಲ್ಲಿ ಹೂತಿಟ್ಟಿದ್ದ ಭ್ರೂಣಗಳು ಪತ್ತೆ