ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಬ್ಬ ‘ಶೋಲೆ’ ಸಿನಿಮಾದ ವಿಲನ್ ಗಬ್ಬರ್ ಸಿಂಗ್ ರೀತಿ ಸಾರ್ವಜನಿಕವಾಗಿ ಗನ್ ಹಿಡಿದು ಅತಿರೇಕದ ವರ್ತನೆ ಮಾಡಿದ್ದಾನೆ.
ಮೈಸೂರಿನ ಅಶೋಕಪುರಂ ನಿವಾಸಿ ಗಣೇಶ್ ಪ್ರಸಾದ್ ಎಂಬಾತ ಕಡು ಕೆಂಪು ಬಣ್ಣದ ಸ್ಕೂಟರ್ ನಲ್ಲಿ ಅದೇ ಬಣ್ಣದ ಬಟ್ಟೆ ತೊಟ್ಟು ಲೈಸೆನ್ಸ್ ಸಿಂಗಲ್ ಬ್ಯಾರಲ್ ಗನ್ ಹಿಡಿದು ಗುಂಡುಗಳ ಸಮೇತ ಪೋಸ್ ಕೊಟ್ಟಿದ್ದಾನೆ.
Advertisement
Advertisement
ಲೈಸೆನ್ಸ್ ಪ್ರಕಾರ ಗನ್ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮಾಡುವಂತಿಲ್ಲ. ಆದರೆ ಗಣೇಶ್ ಪ್ರಸಾದ್ ನಿಯಮಗಳನ್ನು ಗಾಳಿಗೆ ತೂರಿ ಡಕಾಯಿತನ ತರಹ ಉಡುಪು ಧರಿಸಿ ಪೋಸ್ ನೀಡಿದ್ದಾನೆ.
Advertisement
ಈ ಹಿಂದೆ ಈತ ಸೆಪ್ಟೆಂಬರ್ 16 ರಂದು ಸಾರ್ವಜನಿಕ ಸ್ಥಳದಲ್ಲಿ ಓಪನ್ ಫೈರಿಂಗ್ ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದನು. ಈತ ನಿಯಮ ಉಲ್ಲಂಘನೆ ಮಾಡಿ ತನ್ನ ಅತಿರೇಕದ ವರ್ತನೆಯಿಂದ ಜನರಲ್ಲಿ ಭಯ ಉಂಟು ಮಾಡುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಈತನ ಗನ್ ಲೈಸೆನ್ಸ್ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.