ಹುಬ್ಬಳ್ಳಿ: ಹಣದಾಸೆಗಾಗಿ ಕುರುಡ ಸ್ನೇಹಿತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿ ಬಸವರಾಜ್ ಜಿಗಳೂರಗೆ 21 ಲಕ್ಷ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ 2015 ಮೇ 23 ರಂದು ರಾತ್ರಿ ಅಂಧ ಜಗದೀಶ್ ಪರಮೇಶ್ವರ್ ಶಿರಗುಪ್ಪಿ ಅವರನ್ನು ಕೊಲೆಗೈದ ಬಸವರಾಜ್, 51.40 ಲಕ್ಷ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಬಸವರಾಜ್ ಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಇದನ್ನೂ ಓದಿ: ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ
Advertisement
Advertisement
ಹೇಗೆ ನಡೆಯಿತು?
ಜಗದೀಶ್ ಅವರ ಸಂಬಳದ ಅರಿಯರ್ಸ್ 21.50 ಲಕ್ಷ ಗದಗ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು. ಅಂಧನಾಗಿರುವ ಜಗದೀಶ್ ಸಹಾಯಕ್ಕಾಗಿ ಧಾರವಾಡದ ಗೆಳೆಯ ಬಸವರಾಜ್ ಗೆ ಹಣವನ್ನು ತೆಗೆದುಕೊಂಡು ಬರಲು ಜೊತೆಗೆ ಬರುವಂತೆ ಕೇಳಿಕೊಂಡಿದ್ದ. ಅದರಂತೆ 2015 ಮೇ 22 ರಂದು ಬಸವರಾಜ್ ಜಗದೀಶ್ ಅವರನ್ನು ಕರೆದುಕೊಂಡು ಹೋಗಿ ಹಣ ವಿತ್ ಡ್ರಾ ಮಾಡಿಸಿಕೊಟ್ಟಿದ್ದ. ಆದರೆ ಇದಕ್ಕೂ ಮೊದಲೇ ಹಣವನ್ನು ದೋಚಿಕೊಂಡು ಹೋಗಬೇಕೆಂದು ಸಂಚು ರೂಪಿಸಿದ್ದನು.
Advertisement
ಈ ಹಿನ್ನೆಲೆ ಆತ ಗದಗದ ಗ್ರೇನ್ ಮಾರ್ಕೆಟ್‍ನಲ್ಲಿ ಮಚ್ಚು ಖರೀದಿ ಮಾಡಿ ತಂದಿದ್ದ. ಜಗದೀಶ್ ಅವರನ್ನು ಮೇ 23 ರಂದು ರಾತ್ರಿ 8 ರ ಸುಮಾರಿಗೆ ಉಪಾಯದಿಂದ ಉಣಕಲ್ ಸಿದ್ಧಪಜ್ಜನ ಮಠದ ಹಿಂದಿರುವ ಕೆರೆ ಬಳಿ ಕರೆದುಕೊಂಡು ಹೋಗಿದ್ದ ಬಸವರಾಜ್ ಅಲ್ಲಿ ಅಂಧ ಗೆಳೆಯನಿಗೆ ಮಚ್ಚಿನಿಂದ ಸಿಕ್ಕಸಿಕ್ಕಲ್ಲಿ ಹೊಡೆದಿದ್ದ. ಗಂಭೀರ ಗಾಯಗೊಂಡ ಜಗದೀಶ್ ಬಸವರಾಜ್ ಬಳಿಯಿಂದ 1.40 ಲಕ್ಷ ಕಿತ್ತುಕೊಂಡು ಜಾಗ ಖಾಲಿ ಮಾಡಿದ್ದು, ನಂತರ ಚಿಕಿತ್ಸೆ ಫಲಕಾರಿ ಆಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದನ್ನೂ ಓದಿ: ಜಿನೋಮಿಕ್ ಸೀಕ್ವೆನ್ಸ್ ಫಲಿತಾಂಶಕ್ಕೆ ಕನಿಷ್ಠ 7-8 ದಿನಗಳು ಬೇಕಾಗುತ್ತದೆ: ಸುಧಾಕರ್
Advertisement
ಈ ಕುರಿತು ತನಿಖೆ ನಡೆಸಿದ ವಿದ್ಯಾನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್ ಅವರು ಶನಿವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ದಂಡದ 46 ಲಕ್ಷದಲ್ಲಿ 8.90 ಸಾವಿರ ಜಗದೀಶ್ ತಾಯಿಗೆ, 10 ಸಾವಿರ ಕಾನೂನು ಸೇವಾ ಪ್ರಾಧಿಕಾರಕ್ಕೆ ಭರಿಸಲು ಆದೇಶ ನೀಡಲಾಗಿದೆ. ಸರ್ಕಾರಿ ಅಭಿಯೋಜಕ ಗಿರಿಜಾ ಎಸ್. ತಮ್ಮಿನಾಳ ಈ ವಾದ ಮಂಡಿಸಿದ್ದರು.