ಬೆಂಗಳೂರು: ತುಂಡುಡುಗೆ ಧರಿಸಿದ್ದಕ್ಕೆ ವ್ಯಕ್ತಿಯೊಬ್ಬ ಯುವತಿಗೆ ನಿಂದಿಸುವ ಮೂಲಕ ಕಿರುಕುಳ ನೀಡಿದ ಘಟನೆ ನಗರದ ಹೆಚ್ಎಸ್ಆರ್ ಲೇಔಟ್ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯುವತಿ ಗುರುವಾರ ರಾತ್ರಿ ತನ್ನ ಗೆಳೆಯನ ಜೊತೆ ಬೈಕಿನಲ್ಲಿ ಹೊರ ಹೋಗಿದ್ದಳು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಭಾರತೀಯ ಡ್ರೆಸ್ಸಿಂಗ್ ಕೋಡ್ ಪಾಲಿಸಲಿಲ್ಲ ಎಂದು ಯುವತಿಗೆ ನಿಂದಿಸಲು ಶುರು ಮಾಡಿದ್ದಾನೆ. ಇದನ್ನು ಯುವತಿಯ ಗೆಳೆಯ ವಿಡಿಯೋ ಮಾಡಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾನೆ.
Advertisement
Advertisement
ಈ ವಿಡಿಯೋದಲ್ಲಿ ವ್ಯಕ್ತಿ ಹಾಗೂ ಯುವತಿಯ ಪ್ರಿಯಕರ ನಡುವೆ ವಾಗ್ವಾದ ನಡೆದಿದೆ. ಅಲ್ಲದೆ ಆ ವ್ಯಕ್ತಿ ಭಾರತದ ನಿಯಮಗಳನ್ನು ಪಾಲಿಸು, ಭಾರತದ ಉಡುಗೆಗಳನ್ನು ಧರಿಸು ಎಂದು ವ್ಯಕ್ತಿ ವಿಡಿಯೋದಲ್ಲಿ ಪದೇ ಪದೇ ಹೇಳಿದ್ದಾನೆ.
Advertisement
ಬೆಂಗಳೂರಿನ ನಿವಾಸಿಯಾಗಿರುವ ಯುವತಿಯ ಸ್ನೇಹಿತೆ ಸಿಮ್ರನ್ ಕಪೂರ್ ಈ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಆ ವ್ಯಕ್ತಿ ತನ್ನ ಗೆಳೆಯನ ಬಳಿ ಬಂದಿದ್ದಾಗ ಆತ ಮದ್ಯ ಸೇವಿಸಿರಲಿಲ್ಲ ಎಂದು ನನ್ನ ಗೆಳತಿ ತಿಳಿಸಿದ್ದಾಳೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
ಈ ಹಿಂದೆ ಮೇ ತಿಂಗಳಿನಲ್ಲಿ ಮುಂಬೈನಲ್ಲಿ ಮಹಿಳೆಯೊಬ್ಬರು 7 ಮಂದಿಯ ಜೊತೆ ತುಂಡುಡುಗೆ ಧರಿಸಿರುವ ಯುವತಿಯರನ್ನು ಕಂಡರೆ ಅತ್ಯಾಚಾರ ಮಾಡಿ ಎಂದು ಹೇಳಿದ್ದರು. ರೆಸ್ಟೋರೆಂಟ್ ಒಂದರಲ್ಲಿ ಮಹಿಳೆ ಹಾಗೂ ಹುಡುಗಿಯರ ಗುಂಪೊಂದು ಉಡುಗೆಯ ಬಗ್ಗೆ ಮಾತಿನ ಚಕಮಕಿ ನಡೆಸಿತ್ತು. ಇದನ್ನು ಗುಂಪಿನಲ್ಲಿದ್ದ ಯುವತಿಯೊಬ್ಬಳು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿತ್ತು.
ಅಲ್ಲದೆ ಅಗಸ್ಟ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬಳು ತುಂಡುಡುಗೆ ಧರಿಸಿದ ಯುವತಿಗೆ ಕಪಾಳಮೋಕ್ಷ ಮಾಡಿದಲ್ಲದೇ ನಿನ್ನಂತ ಯುವತಿಯರು ಅತ್ಯಾಚಾರಕ್ಕೆ ಒಳಗಾಗಬೇಕು ಎಂದು ಹೇಳಿಕೆ ನೀಡಿದ್ದಳು.