Bengaluru City
ಕುರುಬ ಸಮಾವೇಶದಲ್ಲಿ ಸಿಎಂಗೆ ಕುರಿ, ಕಂಬಳಿ ಗಿಫ್ಟ್!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಸೂಪರ್ ಆಗಿರೋ ಒಂದು ಗಿಫ್ಟ್ ಸಿಕ್ಕಿದೆ.
ಕುರುಬ ಸಂಘದಿಂದ ಅರಮನೆ ಮೈದಾನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ರಾಯಚೂರಿನ ಆಂಜನೇಯ ಅನ್ನೋರು ಜೀವಂತ ಕುರಿ ಗಿಫ್ಟ್ ಮಾಡಿದ್ದಾರೆ. ಅಲ್ಲದೇ ಕುರಿ ಕಂಬಳಿ ಕೊಟ್ಟು, ಕುರುಬ ಪೇಟ ತೊಡಿಸಿ ಜೈ ಕುರುಬ ಅಂತ ಘೋಷಣೆ ಹಾಕಿದ್ದಾರೆ.
ಸಮಾರಂಭದಲ್ಲಿ ಐಎಎಸ್, ಕೆಎಎಸ್, ಪಿಯುಸಿ ಎಸ್‍ಎಸ್‍ಎಲ್‍ಸಿ ಪ್ರತಿಭಾವಂತರಿಗೆ ಸನ್ಮಾನ ಮಾಡಿದ ಬಳಿಕ ಸಿಎಂ ವಿರೋಧಗಳಿಗೆ ತಮ್ಮ ಭಾಷಣದಲ್ಲೆ ಟಾಂಗ್ ನೀಡಿದ್ರು.
ಜಾತಿ ಸಮಿಕ್ಷೆ ರಿಲೀಸ್ ಮಾಡುವಂತೆ ಸಿಎಂ ಭಾಷಣದ ವೇಳೆ ಸಮಾಜದ ವ್ಯಕ್ತಿಯೊಬ್ಬರು ಪತ್ರ ಕಳಿಸಿದ್ರು. ಇದಕ್ಕೆ ವೇದಿಕೆ ಮೇಲೆ ಉತ್ತರಿಸಿದ ಸಿಎಂ, ಮೀಸಲಾತಿ ಹೆಚ್ಚಿಸಲಿಕ್ಕೆ ಅವಕಾಶ ಇದೀಯ ಅಂತ ಕಾನೂನು ಸಲಹೆ ಕೇಳಿದ್ದೇವೆ. ಅವರಿಂದ ಉತ್ತರ ಬಂದ ಬಳಿಕ ವರದಿ ಬಿಡುಗಡೆ ಮಾಡುತ್ತೇವೆ ಅಂದ್ರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧವೂ ಸಿಎಂ ವಾಗ್ದಾಳಿ ನಡೆಸಿದ್ರು.
ಸಮಾಜಕ್ಕೆ ನಾನೇನು ಮಾಡಿದೆ ಅನ್ನೋದನ್ನ ಎಲ್ಲರು ಪ್ರಶ್ನೆ ಮಾಡಿಕೊಳ್ಳಬೇಕು. ಇಲ್ಲವಾದರೆ ಬದುಕು ಸಾರ್ಥಕವಾಗೊಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ. ಯಾರು ಯಾವ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡಿರೋಲ್ಲ. ಸಮಾಜಕ್ಕೆ ನಾವು ಏನಾದ್ರು ಕೊಡುಗೆ ಕೊಟ್ಟು ಹೋಗಬೇಕು. ಶೋಷಣೆಗೊಳಗಾದವರು, ತುಳಿತಕ್ಕೆ ಒಳಗಾದವರು ಇದನ್ನ ನೆನಪಿನಲ್ಲಿ ಇಡಬೇಕು. ಅವಕಾಶ ಸಿಕ್ಕಾಗ, ಅವಕಾಶ ವಂಚಿತರ ಬಗ್ಗೆ ಆಲೋಚನೆ ಮಾಡಬೇಕು ಅಂತ ಸಲಹೆಯಿತ್ತರು.
ಆಕಸ್ಮಿಕವಾಗಿ ನಾನು ಕುರುಬ ಜಾತಿಯಲ್ಲಿ ಹುಟ್ಟಿದೆ. ಆದ್ರೆ ನಾನು ಆರೂವರೆ ಕೋಟಿ ಜನಕ್ಕೆ ಮುಖ್ಯಮಂತ್ರಿ. ನಾನು ಸಿಎಂ ಆದ ಮೇಲೆ ಕರ್ನಾಟಕದ ಆರೂವರೆ ಕೋಟಿ ಜನಕ್ಕೆ ಒಂದಲ್ಲ ಒಂದು ಕಾರ್ಯಕ್ರಮ ಕೊಟ್ಟಿದ್ದೇನೆ. ಕೆಲವರು ನನ್ನನ್ನ ಅಹಿಂದ ಪರವಾಗಿದ್ದಾರೆ ಅಂತ ಮೂದಲಿಸುತ್ತಾರೆ. ಅದು ತಪ್ಪು. ನಾನು ಅಹಿಂದ ಪರ ಇದ್ದೇನೆ. ಅಷ್ಟೆ ಅಲ್ಲ ನಾನು ಎಲ್ಲ ಜನರ ಪರವಾಗಿ ಇದ್ದೇನೆ ಅಂತ ವಿರೋಧಿಗಳಿಗೆ ಭಾಷಣದಲ್ಲೆ ಸಿಎಂ ಟಾಂಗ್ ನೀಡಿದ್ರು.
ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡ್ತಿನಿ ಅಂತ ಹೋದ್ರು. ಕೇಂದ್ರ ಸರ್ಕಾರ ಸಮಾಜಿಕ ನ್ಯಾಯ ದೊಡ್ಡ ಪೆಟ್ಟು ಕೊಡಲು ಮುಂದಾಗಿದೆ. ಹಿಂದುಳಿದ ವರ್ಗಗಳ ಮೇಲಿನ ನಿಯಂತ್ರಣಕ್ಕೆ ಮುಂದಾಗಿದೆ. ಹಾಗಾಗಿ ಎಲ್ಲರಿಗೂ ಚಪ್ಪಾಳೆ ಹೊಡೆಯುವುದು ಬೇಡ. ಯಾರು ನಮ್ಮ ಪರವಾಗಿ ಕೆಲಸ ಮಾಡ್ತಾರೆ ಅನ್ನೋದನ್ನ ತಿಳಿದುಕೊಳ್ಳಬೇಕು ಅಂತ ಅವರು ಹೇಳಿದ್ರು.
