– ಸರ್ಕಾರಿ ಕೆಲಸಕ್ಕೆ ಹಣ ಪಡೆದು ವಂಚನೆ
– ವಂಚನೆಗೆ ಒಳಗಾದವರಿಂದ ಸಿಎಂಗೆ ದೂರು
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹೀಗೆ ಸಾಲು ಸಾಲು ಘಟಾನುಘಟಿ ನಾಯಕರ ಜೊತೆ ಗುರುತಿಸಿಕೊಂಡು ಹಣ ಮಾಡೋದಕ್ಕೆ ಹೊರಟಿರುವ ವ್ಯಕ್ತಿಯೊಬ್ಬನ ಬಣ್ಣ ಇದೀಗ ಬಯಲಾಗಿದೆ.
ಹೌದು. ಮಂಜುನಾಥನ ಹೆಸರಿಟ್ಟುಕೊಂಡಿರುವ ವ್ಯಕ್ತಿ ಅಮಾಯಕರಿಗೆ ವಂಚಿಸಿಸುತ್ತಿದ್ದಾನೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದುಕೊಳ್ಳುತ್ತಾನೆ. ರಾಜಕೀಯ ನಾಯಕರ ಜೊತೆ ಇರುವ ಫೋಟೋಗಳನ್ನೇ ಬಂಡವಾಳ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾನೆ.
Advertisement
Advertisement
ಕಾಂಗ್ರೆಸ್‍ನ ಘಟಾನುಘಟಿ ನಾಯಕರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಸೆಲ್ಫಿ ಹಿಡಿದುಕೊಂಡು ಮುಖ್ಯಮಂತ್ರಿ ಸೇರಿ ಸರ್ಕಾರದ ಮಟ್ಟದಲ್ಲಿ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ನಿಮಗೆ ಸರ್ಕಾರಿ ಕೆಲಸ ಕೊಡಿಸಿಕೊಡ್ತೀನಿ ಅಂತ ಸರ್ಕಾರಿ ಕೆಲಸದ ಆಕಾಂಕ್ಷಿಗಳನ್ನ ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದಾನೆ. ಆಕಾಂಕ್ಷಿಗಳ ಬಳಿ ಕೆಲಸಕ್ಕೆ ಅಂತ ಹಣ ಪಡೆದ ಮೇಲೆ ಸರ್ಕಾರಿ ಕೆಲಸವೂ ಇಲ್ಲ ಕೊಟ್ಟ ದುಡ್ಡು ಕೊಡದೇ ಬ್ಲಾಕ್ ಮೇಲ್ ಮಾಡಿಕೊಂಡು ಒಡಾಡುತ್ತಿದ್ದಾನೆ ಅಂತ ಮೋಸ ಹೋದ ಹನುಮಂತ ಸದಾಶಿವ ದೇಸಾಯಿ ಹೇಳಿದ್ದಾರೆ.
Advertisement
ಪಿಡಿಒ ಕೆಲಸ ಕೊಡಿಸಿಕೊಡ್ತಿನಿ ಅಂತ ಹೇಳಿ ಹನುಮಂತ ಸದಾಶಿವ ದೇಸಾಯಿಯನ್ನ ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿರುತ್ತಾನೆ. ಬಳಿಕ ಲೀ ಮೇರಿಡಿಯನ್ ಹೋಟೆನಲ್ಲಿ ಡೀಲ್ ಕೂರಿಸಿ ತಲಾ ಮೂರು ಲಕ್ಷದಂತೆ ಹಣ ವಸೂಲಿ ಮಾಡಿರುತ್ತಾನೆ. ಸರ್ಕಾರಿ ಕೆಲಸ ಸಿಗುತ್ತೆ ಲೈಫ್ ಸೆಟಲ್ ಆಗಬಹುದೆಂದು ಆಕಾಂಕ್ಷಿಗಳು ಹೆಂಡತಿಯ ತಾಳಿ, ಬಂಗಾರವನೆಲ್ಲ ಮಾರಿ ಹಣ ಹೊಂದಿಸಿ ಈ ಮಹಾನುಭಾವ ಜೆ. ಮಂಜುನಾಥ್‍ನ ಹುಂಡಿಗೆ ಹಾಕಿದ್ದಾರೆ. ಮಂಜುನಾಥ್ ಮಾತ್ರ ಸರ್ಕಾರಿ ಕೆಲಸದ ಕೃಪೆ ತೊರದೆ ಹಣವೂ ಕೊಡದೇ ಹಣ ಕೇಳುವವರಿಗೆ ಬೆದರಿಕೆ ಹಾಕಿಕೊಂಡು ಮರೆಮಾಚಿಕೊಂಡಿದ್ದಾನೆ ಅಂತ ಮೊಸ ಹೋದವರು ಆರೋಪಿಸುತ್ತಿದ್ದಾರೆ.
Advertisement
ಪೊಲಿಟಿಕಲ್ ಲೀಡರ್ ಜೆ ಮಂಜುನಾಥ್ ಈ ಹಿಂದೆ ಮೂರು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಆದರೂ ಕೂಡ ಆತ ಮಾತ್ರ ತನ್ನ ಚಾಳಿಯನ್ನ ಮುಂದುವರಿಸಿದ್ದಾನೆ. ಹಣ ಕಳೆದುಕೊಂಡಿರುವವರು ವಂಚಕನಿಂದ ನ್ಯಾಯಕೊಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯ ಬಳಿ ಹೋಗಿದ್ದಾರೆ. ಎಚ್‍ಡಿಕೆಗೆ ಪ್ರಕರಣ ಸಂಬಂಧ ದೂರು ಕೊಟ್ಟಾಗ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದ್ರೆ ಇನ್ನೂ ಕೂಡ ಹಣ ಕಳೆದುಕೊಂಡವರಿಗೆ ನ್ಯಾಯ ಸಿಗದೇ ಕಚೇರಿ ಅಲೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv