ಬಳ್ಳಾರಿ: ಕಮಲ ಬಿಟ್ಟು ಹಸ್ತಲಾಘವ ಮಾಡಿ ಮತ್ತೆ ಜನರ ಮುಂದೆ ಹೋಗಿರೋ ಶಾಸಕ ಆನಂದ್‍ಸಿಂಗ್ ಅವರಿಗೆ ಆರಂಭದಲ್ಲೇ ಶಾಕ್ ತಗುಲಿದೆ.
ನೀವು ಹತ್ತು ವರ್ಷ ಶಾಸಕರಾಗಿದ್ದೀರಿ. ಜನರಿಗೆ ಎನು ಮಾಡಿದ್ದೀರಿ. ನಿಮ್ಮಗ್ಯಾಕೆ ವೋಟ್ ಹಾಕಬೇಕು. ನಿಮ್ಮ ಆಶ್ವಾಸನೆ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ಮತದಾರನೊಬ್ಬ ಸಾರ್ವಜನಿಕವಾಗಿ ಆನಂದಸಿಂಗ್‍ಗೆ ತರಾಟೆಗೆ ತಗೆದುಕೊಂಡಿದ್ದಾರೆ.
ಮಂಗಳವಾರ ರಾತ್ರಿ ವಿಜಯನಗರದ ಹೊಸ ಮಲ್ಲಪ್ಪಗುಡಿ ಗ್ರಾಮದಲ್ಲಿ ಭಾಷಣ ಮಾಡುತ್ತಿದ್ದ ಆನಂದಸಿಂಗ್‍ಗೆ ಮತದಾರ ಫುಲ್ ಕ್ಲಾಸ್ ತಗೊಂಡಿದ್ದಾರೆ. ಇದರಿಂದ ಮುಜಗರಕ್ಕೊಳಗಾದ ಆನಂದ್ ಸಿಂಗ್, ಆತನನ್ನ ಸಮಧಾನಪಡಿಸಲು ಹರಸಾಹಸ ಮಾಡಿದ್ದರು. ಇದನ್ನೂ ಓದಿ: 10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಕೊನೆಗೆ ನನ್ನ ಸ್ವಂತ ಜಾಗದಲ್ಲಿ ಮನೆ ಕಟ್ಟಿಸಿಕೊಡೋದಾಗಿ ಆಮಿಷ ಕೂಡ ಒಡ್ಡಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಇದನ್ನು ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರಿಗೂ ಇದನ್ನು ರೆಕಾರ್ಡ್ ಮಾಡಬೇಡಿ ಬಂದ್ ಮಾಡಿ ಎಂದು ಎಚ್ಚರಿಕೆ ಕೂಡ ನೀಡಿದ್ದರು. ಇದನ್ನೂ ಓದಿ: ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!