ವಡೋದರ: ತನ್ನಿಬ್ಬರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ 45 ವರ್ಷದ ತಂದೆಗೆ ಗುಜರಾತ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆಯನ್ನು ನೀಡಿ ತೀರ್ಪು ಪ್ರಕಟಿಸಿದೆ.
ನ್ಯಾಯಾಧೀಶ ಜೆ.ಎಂ.ಸೊಜಿತ್ರ ಶನಿವಾರ ತೀರ್ಪು ನೀಡಿದ್ದಾರೆ. ಅಪರಾಧಿಯ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲಾಗಿತ್ತು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ಅಪರಾಧಿಗೆ 20 ವರ್ಷದ ಜೈಲುವಾಸದ ಶಿಕ್ಷೆಯನ್ನು ನೀಡಿದೆ ಎಂದು ಸರ್ಕಾರಿ ವಕೀಲ ಹೆಚ್.ಆರ್.ಜೋಶಿ ಹೇಳಿದ್ದಾರೆ.
2013ರ ಡಿಸೆಂಬರ್ ನಲ್ಲಿ 13 ಮತ್ತು 14 ವರ್ಷದ ಮಕ್ಕಳು ಬಂದು ನಮ್ಮ ಮಲತಂದೆ ಕಳೆದ ಎರಡು ತಿಂಗಳನಿಂದ ಅತ್ಯಾಚಾರ ಎಸಗಿದ್ದಾನೆ. ತಾಯಿ ಕೆಲಸಕ್ಕಾಗಿ ಹೊರ ಹೋದ ಕೂಡಲೇ ನಮ್ಮ ಮೇಲೆ ಎರಗುತ್ತಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv