ಲಕ್ನೋ: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.
ಜಾಫ್ರಿನ್ ಅಂಜುಮ್ ಅಯೋಧ್ಯೆಯ ಹೈದರ್ ಗಂಜ್ ತೆಹಸಿಲ್‍ನಲ್ಲಿ ಜನ ಬಜಾರ್ ನಿವಾಸಿ. ಜಾಫ್ರಿನ್ ಆಗಸ್ಟ್ 18ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಜನಿಸಿದ ಕಾರಣ ಜಾಫ್ರಿನ್ ಪತಿ ಆಸ್ತಿಕರ್ ಅಹ್ಮದ್ ತಕ್ಷಣ ತ್ರಿವಳಿ ತಲಾಖ್ ನೀಡಿದ್ದಾನೆ.
Advertisement
ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ನನ್ನ ತಂದೆಗೆ ಸಾಧ್ಯವಾಗದ ಕಾರಣ ನನ್ನ ಪತಿ ಕಿರುಕುಳ ನೀಡುತ್ತಿದ್ದಾರೆ. ಮದುವೆ ಆದ ಮೊದಲ ತಿಂಗಳಿನಲ್ಲಿ ನನ್ನ ಪತಿ ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
Advertisement
ಅಲ್ಲದೆ ಆಗಸ್ಟ್ 18ರಂದು ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ತಕ್ಷಣ ಅವರು ನನಗೆ ತ್ರಿವಳಿ ತಲಾಖ್ ನೀಡಿದ್ದಾರೆ. ನನಗೆ ನ್ಯಾಯ ಬೇಕು ಎಂದು ಜಾಫ್ರಿನ್ ಮಾಧ್ಯಮವೊಂದಕ್ಕೆ ಹೇಳಿದ್ದಾಳೆ.
Advertisement
ನವೆಂಬರ್ 2018ರಲ್ಲಿ ಜಾಫ್ರಿನ್ ಅಂಜುಮ್ ನಕತ್ವಾರಾ ಗ್ರಾಮದ ಆಸ್ತಿಕರ್ ಅಹ್ಮದ್‍ನನ್ನು ಮದುವೆಯಾಗಿದ್ದರು. ಸದ್ಯ ಜಾಫ್ರಿನ್ ತಲಾಖ್ ನೀಡಿದ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಅಯೋಧ್ಯೆ ಎಸ್‍ಪಿ ಶೈಲೇಂದ್ರ ಕುಮಾರ್ ಸಿಂಗ್ ಅವರು, ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿ ಆಸ್ತಿಕರ ಅಹ್ಮದ್ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.