ಬೀದರ್: ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭೇಟಿ ನೀಡಿ, ವಾಪಸ್ಸಾಗುತ್ತಿರುವಾಗ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttara Pradesh) ಕಾಶಿಯಲ್ಲಿ ನಡೆದಿದೆ.ಇದನ್ನೂ ಓದಿ: ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ
Advertisement
ಮೃತ ವ್ಯಕ್ತಿಯನ್ನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಠಾಣಾಕುಶನೂರು ಗ್ರಾಮದ ಮುಖಂಡ ಕಂಟೆಪ್ಪಾ ಜಿರ್ಗೆ (65) ಎಂದು ಗುರುತಿಸಲಾಗಿದೆ.
Advertisement
ಮೃತ ವ್ಯಕ್ತಿ ಹಲವು ದಿನಗಳ ಹಿಂದೆ ಮಹಾಕುಂಭಮೇಳಕ್ಕೆ ಕುಟುಂಬದ ಜೊತೆಗೆ ಹೋಗಿದ್ದರು. ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ ಮುಗಿಸಿಕೊಂಡು ಬೀದರ್‌ಗೆ ಹಿಂದಿರುಗುತ್ತಿದ್ದಾಗ ಉತ್ತರಪ್ರದೇಶದ ಕಾಶಿಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಬಳಿಕ ಆಸ್ಪತ್ರೆಗೆ ಸೇರಿಸಿದಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮೆಟ್ರೋ ದರ ಬದಲಾವಣೆ, ಶೀಘ್ರವೇ ಪರಿಷ್ಕೃತ ಪಟ್ಟಿ ಪ್ರಕಟ: ಬಿಎಂಆರ್‌ಸಿಎಲ್