Connect with us

Latest

ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿ, ವಿಡಿಯೋ ಮಾಡಿದ ಪತಿ ವಿರುದ್ಧ ಎಫ್‍ಐಆರ್

Published

on

ನವದೆಹಲಿ: ಬೇರೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕದಲ್ಲಿ ತೊಡಗುವಂತೆ ಮಾಡಿ ಅದರ ವಿಡಿಯೋ ಚಿತ್ರೀಕರಣ ಮಾಡಿದ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ದಕ್ಷಿಣ ದೆಹಲಿ ಮೂಲದ ಒಳಾಂಗಣ ವಿನ್ಯಾಸಕಿಯಾಗಿರೋ 28 ವರ್ಷದ ಮಹಿಳೆ, ತನ್ನ ಪತಿ ಹಣ ಕೀಳುವ ಉದ್ದೇಶದಿಂದ ಈವೆಂಟ್ ಆರ್ಗನೈಸರ್‍ನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿದ್ರು ಎಂದು ಆರೋಪಿಸಿ ಕಳೆದ ತಿಂಗಳು ದೂರು ದಾಖಲಿಸಿದ್ದಾರೆ.

ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿದ್ದಲ್ಲದೆ ಅದರ ವಿಡಿಯೋ ಮಾಡಿದ್ದಾರೆ. ವಿಡಿಯೋ ಇಟ್ಟುಕೊಂಡು ಅಲಿಯನ್ನು(ಹೆಸರು ಬದಲಾಯಿಸಲಾಗಿದೆ) ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡುವಂತೆ ಒತ್ತಾಯಿಸಿದ್ದಾರೆಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿ ಪತಿ ಇಷ್ಟಕ್ಕೇ ಸುಮ್ಮನಾಗದೆ, ಹಣ ಕೀಳಲು ನಾನು ನಿನ್ನನ್ನು ಇನ್ಮುಂದೆ ಯಾವ ವ್ಯಕ್ತಿಯ ಬಳಿಯಾದರೂ ಕಳಿಸಬಹುದು ಎಂದು ಹೇಳಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಪತಿ ಹಾಗೂ ಅಲಿ ವಿರದ್ಧ ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಹಾಗೂ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

2016ರಲ್ಲಿ ನಮ್ಮಿಬ್ಬರ ವಿವಾಹವಾಯ್ತು. ಮದುವೆಯ ನಂತರ ನನ್ನ ಪತಿಗೆ ದಹಲಿಯಲ್ಲಿ ಮನೆಯಲ್ಲಿವಾದ್ದರಿಂದ ನನ್ನ ತವರು ಮನೆಯಲ್ಲೇ ಅವರೂ ಇದ್ದರು. ಮದುವೆಯಾಗಲು ತುಂಬಾ ಆತುರ ತೋರಿದ್ರು. ಮದುವೆಯ ನಂತರ ಅವರ ನಡವಳಿಕೆ ಇದ್ದಕ್ಕಿದ್ದಂತೆ ಬದಲಾಯಿತು. ಸ್ವಂತ ಉದ್ಯಮ ಶುರು ಮಾಡಲು ಹಣ ಕೊಡುವಂತೆ ಕೇಳಿದ್ರು. ಅವರ ಒತ್ತಾಯ ಮತ್ತು ಬೆದರಿಕೆಗೆ ಮಣಿದು ನಾನು ಮತ್ತು ನನ್ನ ಪೋಷಕರು ವಿವಿಧ ದಿನಾಂಕಗಳಲ್ಲಿ ಸುಮಾರು 2 ಕೋಟಿ ರೂ. ನೀಡಿದ್ದೇವೆ. ನಾವು ಹಣ ಕೊಡಲು ನಿರಾಕರಿಸಿದಾಗ ನನ್ನ ಕುಟುಂಬಸ್ಥರನ್ನ ಬೈಯ್ಯುತ್ತಿದ್ರು. ನನ್ನ ಮೇಲೆ ಹಲ್ಲೆ ಮಾಡ್ತಿದ್ರು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ನಂತರ ನನ್ನ ಪತಿ ನನಗೆ ಅರಿವಿಲ್ಲದಂತೆ ನನ್ನ ಫೋನ್‍ನಿಂದ ಅಲಿಗೆ ಅಸಭ್ಯವಾದ ಸಂದೇಶಗಳನ್ನ ಕಳಿಸುತ್ತಿದ್ರು. ಮುಂದೆ ಆತನನ್ನು ಬ್ಲಾಕ್‍ಮೇಲ್ ಮಾಡಬಹುದು ಎಂಬ ದುರುದ್ದೇಶದಿಂದ ನನಗೆ ಆತನೊಂದಿಗೆ ಸ್ನೇಹ ಬೆಳೆಸಿಕೊಳ್ಳುವಂತೆ ಒತ್ತಾಯಿಸಿದ್ರು ಎಂದು ಹೇಳಿದ್ದಾರೆ.

ಕಳೆದ ನವೆಂಬರ್‍ನಲ್ಲಿ ನನ್ನ ಪತಿ ನನಗೆ ಇಷ್ಟವಿಲ್ಲದಿದ್ರೂ ಅಲಿ ಜೊತೆಗೆ ಲುಧಿಯಾನಾಗೆ ಹೋಗುವಂತೆ ಬಲವಂತ ಮಾಡಿದ್ರು. ಆತನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ರು. ಆದ್ರೆ ನಾನು ಅದಕ್ಕೆ ನಿರಾಕರಿಸಿದೆ. ಜನವರಿಯಲ್ಲಿ ನನ್ನನ್ನು ನೋಯ್ಡಾದ ಫಾರ್ಮ್‍ಹೌಸ್‍ಗೆ ಕರೆದುಕೊಂಡು ಹೋದ್ರು. ಅಲ್ಲಿ ಆಗಲೇ ಅಲಿ ಬಂದು ಕಾಯುತ್ತಿದ್ದ. ಅವನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒತ್ತಾಯಿಸಿದ್ರು. ನಂತರ ಅಲಿ ನನ್ನ ಮೇಲೆ ಅತ್ಯಾಚಾರವೆಸಗಿದ. ಫೆಬ್ರವರಿಯಲ್ಲಿ ನನ್ನ ಪತಿ ನನ್ನ ಡೆಬಿಟ್ ಕಾರ್ಡ್ ಬಳಸಿ ದಕ್ಷಿಣ ದೆಹಲಿಯಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ರು. ನಾನು ಅಲಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ ಯಾವುದೇ ಕಾರಣಕ್ಕೂ ಹಣವನ್ನು ಹಿಂದಿರುಗಿಸುವುದಿಲ್ಲ ಅಂದ್ರು. ನನ್ನ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ರು ಎಂದು ಎಫ್‍ಐಆರ್‍ನಲ್ಲಿ ಮಹಿಳೆ ಆರೋಪಿಸಿದ್ದಾರೆ.

ಅಂದು ರಾತ್ರಿ ಅಲಿ ನನ್ನ ಮೇಲೆ ಅತ್ಯಾಚಾರ ಮಾಡಿದ. ಆತ ಹೋದ ನಂತರ ನನ್ನ ಪತಿ ರೂಮಿನೊಳಗೆ ಬಂದು ಟಿವಿ ಬಳಿ ಅಡಗಿಸಿಟ್ಟಿದ್ದ ಹಿಡನ್ ಕ್ಯಾಮೆರಾ ಹೊರತೆಗೆದರು. ಅವರು ಇದನ್ನ ರೆಕಾರ್ಡ್ ಮಾಡಿದ್ದಾರೆಂದು ತಿಳಿದು ನನಗೆ ಶಾಕ್ ಆಯ್ತು. ಇನ್ಮುಂದೆ ಅಲಿಯನ್ನು ಬ್ಲಾಕ್‍ಮೇಲ್ ಮಾಡಿ ಹಣ ಕೀಳಬೇಕೆಂದು ನನಗೆ ಹೇಳಿದ್ರು. ಅಲ್ಲದೆ ಇನ್ಮುಂದೆ ಲೈಂಗಿಕ ಕ್ರಿಯೆಗಾಗಿ ನನ್ನನ್ನು ಯಾರ ಬಳಿ ಬೇಕಾದ್ರೂ ಕಳಿಸಬಹುದು ಎಂದು ಹೇಳಿದ್ರು. ಅದಕ್ಕೆ ಒಪ್ಪದಿದ್ರೆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿದ್ರು ಎಂದಿದ್ದಾರೆ.

ಘಟನೆಯ ನಂತರ 10 ಲಕ್ಷ ಹಾಗೂ 30 ಲಕ್ಷ ರೂ. ಗೆ ಬೇಡಿಕೆ ಇಟ್ರು. ಈ ಬಗ್ಗೆ ನನ್ನ ಪೋಷಕರಿಗೆ ಗೊತ್ತಾದ ನಂತರ ಅವರ ಮರ್ಯಾದೆ ಹಾಳು ಮಾಡುವುದಾಗಿ ಹೆದರಿಸಿದ್ರು. ನನ್ನ ಜೀವನ ಹಾಳಾಗಿದೆ. ಆತ್ಮಹತ್ಯೆ ಮಾಡಿಕೊಳ್ಳದೆ ನನಗೆ ಬೇರೆ ದಾರಿ ಇಲ್ಲ. ಈ ಘಟನೆಯಿಂದಾಗಿ ನಾನು ಯಾರಿಗೂ ಮುಖ ತೋರಿಸದಂತಾಗಿದೆ. ನನ್ನ ಪತಿ ಹಾಗೂ ಆತನ ಸ್ನೇಹಿತ ನನ್ನ ಹಾಗೂ ನನ್ನ ಕುಟುಂಬದ ಮರ್ಯಾದೆಗೆ ಕಳಂಕ ತಂದಿದ್ದಾರೆ ಎಂದು ಮಹಿಳೆ ಪೋಲೀಸರ ಬಳಿ ಹೇಳಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *