ರಿಯೋ ಡಿ ಜನೈರೋ: ಕಾರಿನ ಸ್ಕ್ರ್ಯಾಪ್ ಭಾಗಗಳಿಂದ ಯುವಕನೊಬ್ಬ ಹೆಲಿಕಾಪ್ಟರ್ ರೆಡಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
Advertisement
ಬ್ರೆಜಿಲ್‍ನ ಯುವಕ ರಿಯೊ ಗ್ರಾಂಡೆ ಡೊ ನಾರ್ಟೆನ ಕಾರಿನ ಸ್ಕ್ರ್ಯಾಪ್ ಭಾಗಗಳನ್ನು ಉಪಯೋಗಿಸಿಕೊಂಡು ಒಂದು ಹೆಲಿಕಾಪ್ಟರ್ ತಯಾರಿಸಿದ್ದಾನೆ. ಅದು ಅಲ್ಲದೇ ಈ ಹೆಲಿಕಾಪ್ಟರ್ ಹಾರಾಡುವುದನ್ನು ತೋರಿಸಲು ರಸ್ತೆ ಮಧ್ಯೆ ಟೆಸ್ಟ್ ಮಾಡಿದ್ದು, ಯಶಸ್ವಿಯಾಗಿದೆ. ದೃಶ್ಯವನ್ನು ಸ್ಥಳಿಯರು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ
Advertisement
ಈ ವೀಡಿಯೋ ನೋಡಿದ ನೆಟ್ಟಿಗರು ಯುವಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸೆಯ ಕಮೆಂಟ್ ಮಾಡುತ್ತಿದ್ದಾರೆ. ಪ್ರಸ್ತುತ ಈ ವೀಡಿಯೋ ವಿಶ್ವದಾದ್ಯಂತ ವೈರಲ್ ಆಗಿದೆ.
Advertisement
Advertisement
ಬ್ರೆಜಿಲ್‍ನಲ್ಲಿ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದ್ದು, ಹೆಲಿಕಾಪ್ಟರ್ ನಿರ್ಮಾಣದಲ್ಲಿ ಮೋಟಾರು ಸೈಕಲ್‍ಗಳು, ಟ್ರಕ್‍ಗಳು, ಕಾರುಗಳು ಮತ್ತು ಬೈಸಿಕಲ್‍ಗಳ ಭಾಗಗಳನ್ನು ಬಳಸಲಾಗಿದೆ. ವೋಕ್ಸ್‍ವ್ಯಾಗನ್ ಬೀಟಲ್‍ನ ಎಂಜಿನ್‍ನಿಂದ ಇದನ್ನು ಚಲಾಯಿಸಬಹುದು.
ವೀಡಿಯೋದಲ್ಲಿ, ಜೊವೊ ಡಯಾಸ್ ನಗರದ ನಿವಾಸಿ ಜೆನೆಸಿಸ್ ಗೋಮ್ಸ್ ಅವರು ಹೆಲಿಪ್ಯಾಡ್ ಆಗಿ ರಸ್ತೆಯನ್ನು ಬಳಸಿಕೊಂಡಿದ್ದು, ಹೆಲಿಕಾಪ್ಟರ್ ಅನ್ನು ಸ್ವಲ್ಪ ದೂರಕ್ಕೆ ತೆಗೆದುಕೊಂಡು ಹೋಗಿ ನಂತರ, ಅದನ್ನು ಹಾರಿಸುತ್ತಾರೆ. ಇದನ್ನು ನೋಡಿದ ಅಲ್ಲಿನ ಜನರು ದಂಗುಬಡಿದಂತೆ ನಿಂತುಕೊಳ್ಳುತ್ತಾರೆ.
Homem no interior do RN constrói helicóptero com restos de carros e motor de fusca, faz teste e decola. pic.twitter.com/4zpS1jvy9p
— Меndes (@MendesOnca) December 9, 2021
ಯಾರಿದು?
ಗೋಮ್ಸ್ ಬಾಲ್ಯದಿಂದಲೂ ವಾಯುಯಾನದಲ್ಲಿ ಆಸಕ್ತಿ ಹೊಂದಿದ್ದು, ಯಾವಾಗಲೂ ಹೆಲಿಕಾಪ್ಟರ್ ಸವಾರಿ ಮಾಡಲು ಬಯಸುತ್ತಿರುತ್ತಾರೆ. ಆದರೆ ಅವರಿಗೆ ಅವಕಾಶ ಸಿಗದಿದ್ದಾಗ, ತಮ್ಮದೇ ಆದ ಹೆಲಿಕಾಪ್ಟರ್ ನಿರ್ಮಿಸಲು ನಿರ್ಧರಿಸುತ್ತಾರೆ. ಈ ವೀಡಿಯೋದಲ್ಲಿರುವ ಹೆಲಿಕಾಪ್ಟರ್ ತನ್ನ ಸ್ನೇಹಿತನದು ಎಂದು ಗೋಮ್ಸ್ ನಂತರ ದೃಢಪಡಿಸಿದ್ದು, ಮುಂದೆ ನಾನೇ ನನ್ನ ವೈಯಕ್ತಿಕ ಹೆಲಿಕಾಪ್ಟರ್ ಅನ್ನು ನಿರ್ಮಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ
ನನ್ನ ಸ್ನೇಹಿತನ ಬಳಿ ಗೈರೊಸ್ಕೋಪ್ ಇತ್ತು. ಇದು ಮೊದಲ ಬಾರಿಗೆ ನಾವು ಜೋವೊ ಡಯಾಸ್ ನಗರದ ಮೇಲೆ ಎತ್ತರಕ್ಕೆ ಹಾರಿದೆವು. ಇದು ನಿಜವಾಗಿಯೂ ಚೆನ್ನಾಗಿತ್ತು. ಎಲ್ಲ ಸ್ಕ್ರ್ಯಾಪ್ ವಸ್ತುಗಳನ್ನು ಖರೀದಿಸಿ ಈ ಹೆಲಿಕಾಪ್ಟರ್ ಅನ್ನು ನಿರ್ಮಿಸಲಾಗಿತ್ತು ಎಂದು ತಿಳಿಸಿದರು.