ಮೈಸೂರು: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿರ್ಸಜನೆ ಮಾಡಿ ನಿಯಮ ಉಲ್ಲಂಘಿಸಿದ ಆಟೋ ಚಾಲಕನೋರ್ವನಿಗೆ ಮೈಸೂರು ನಗರ ಪಾಲಿಕೆ 1 ಸಾವಿರ ರೂ. ದಂಡ ವಿಧಿಸಿದೆ.
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂಬ ನಿಯಮವಿದೆ. ಆದರೆ ಬಹುತೇಕರು ಈ ನಿಯಮ ಗೊತ್ತಿದ್ದರೂ ಉಲ್ಲಂಘಿಸುತ್ತಾರೆ. ನಿಯಮ ಉಲ್ಲಂಘಿಸಿದರೆ ಯಾರು ದಂಡವೇನೂ ಹಾಕಲ್ಲ ಎಂಬ ಧೈರ್ಯದಲ್ಲಿ ಹೀಗೆ ಮಾಡುತ್ತಾರೆ. ಆದರೆ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೀಗೆ ಈ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಒಂದು ಸಾವಿರ ದಂಡ ಕಟ್ಟಿದ್ದಾನೆ. ಅಲ್ಲದೆ ನಿಯಮ ಹೇಳಲು ಬಂದ ಅಧಿಕಾರಿ ಜೊತೆ ಅನುಚಿತವಾಗಿ ವರ್ತಿಸಿದ ಕಾರಣ ಕೆಲ ಕಾಲ ಪೊಲೀಸರ ಅತಿಥಿ ಕೂಡ ಆಗಿದ್ದಾನೆ.
Advertisement
Advertisement
ಆಟೋ ಚಾಲಕ ಚೇತನ್ ಮೈಸೂರಿನ ತಿಲಕ್ ನಗರದ ವಲಯ ಕಚೇರಿ 6ರ ಬಳಿ ಮೂತ್ರ ವಿಸರ್ಜನೆ ಮಾಡಿದ್ದನು. ಆಗ ಅಧಿಕಾರಿಗಳು ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಬುದ್ದಿ ಹೇಳಿದ್ದರು.
Advertisement
ಇದಕ್ಕೆ ಕ್ಯಾರೆ ಎನ್ನದ ಚೇತನ್ ಮಹಿಳಾ ಆರೋಗ್ಯ ನಿರೀಕ್ಷಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಒಂದು ಸಾವಿರ ದಂಡ ವಿಧಿಸಿ, ಅಧಿಕಾರಿ ಜೊತೆ ಅನುಚಿತವಾಗಿ ವರ್ತಿಸಿದ್ದಾಕ್ಕಾಗಿ ಮಂಡಿ ಪೊಲೀಸ್ ಠಾಣೆಗೆ ಆತನನ್ನು ಒಪ್ಪಿಸಿಸಲಾಗಿದ್ದು, ಪೊಲೀಸರು ಚೇತನ್‍ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.