ವಾಷಿಂಗ್ಟನ್: ಅಮೆರಿಕದ ವರ್ಜಿನಿಯಾ ನಿವಾಸಿಯೊಬ್ಬರ ಮನೆಯ ಟಾಯ್ಲೆಟ್ ನಲ್ಲಿ ಗುರುವಾರ ರಾತ್ರಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಇದರ ಫೋಟೋವನ್ನು ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಹಾವನ್ನು ಕಂಡ ಕೂಡಲೇ ಜೇಮ್ಸ್ ತನ್ನ ಗೆಳೆಯನ ಜೊತೆ ಸೇರಿ ಟಾಯ್ಲೆಟ್ ನಿಂದ ಹೊರತೆಗೆದು ರಕ್ಷಿಸಿದ್ದಾರೆ. ಅಲ್ಲದೇ ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳುವ ಮೊದಲು ಕೆಳಗೆ ನೋಡಿ ಕುಳಿತುಕೊಳ್ಳಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.
Advertisement
ಏನಿದು ಘಟನೆ?:
ವರ್ಜಿನಿಯಾ ನಿವಾಸಿ ಜೇಮ್ಸ್ ಗುರುವಾರ ರಾತ್ರಿ ಟಾಯ್ಲೆಟ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅದರೊಳಗೆ ಮೊದಲು ಹೆಬ್ಬಾವಿನ ತಲೆಯ ಸ್ಪಲ್ಪ ಭಾಗ ಮಾತ್ರ ಕಂಡಿದ್ದರು. ಆದ್ರೆ ಅದನ್ನು ಅಷ್ಟೇನೂ ಗಮನಕ್ಕೆ ತರದ ಅವರು, ಸ್ವಲ್ಪ ಸಮಯದ ಬಳಿಕ ನೋಡಿದಾಗ ಹಾವಿನ ಸಂಪೂರ್ಣ ತಲೆ ಹೊರ ಬಂದಿತ್ತು. ಅಲ್ಲದೇ ಹಾವಿನ ನಾಲಗೆ ಕೂಡ ಹೊರ ಬಂದಿತ್ತು. ನಾವು ಹಾವುಗಳನ್ನು ಅಂಗಳದಲ್ಲಿ ನೋಡಿದ್ದೆವು. ಆದ್ರೆ ಟಾಯ್ಲೆಟ್ ನಲ್ಲಿ ನೋಡಿರಲಿಲ್ಲ. ಹೀಗಾಗಿ ಇದನ್ನು ಕಂಡು ಒಂದು ಬಾರಿ ಹೌಹಾರಿದೆ ಅಂತ ಜೇಮ್ಸ್ ತಿಳಿಸಿದ್ದಾರೆ.
Advertisement
ಹಾವು ಕಂಡ ಕೂಡಲೇ ಜೇಮ್ಸ್ ತನ್ನ ರೂಮೆಟ್‍ನನ್ನು ಕರೆದಿದ್ದಾರೆ. ಬಳಿಕ ಪ್ರಾಣಿ ನಿಯಂತ್ರಣಾಧಿಕಾರಿ ಬರುವ ಮುಂಚೆಯೇ ಇಬ್ಬರು ಸೇರಿ ಹಾವನ್ನು ಟಾಯ್ಲಟ್ ನಿಂದ ಹೊರತೆಗೆದು ಬಕೆಟ್ ನಲ್ಲಿ ಹಾಕುವ ಮೂಲಕ ರಕ್ಷಿಸಿದ್ದಾರೆ. ಹಾವನ್ನು ಹಿಡಿದಾಗ ಅದೇನೂ ನಮಗೆ ತೊಂದರೆ ಮಾಡಿಲ್ಲ ಅಂತ ಜೇಮ್ಸ್ ಹಾವಿನ ಫೋಟೊದೊಂದಿಗೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
Advertisement
https://www.facebook.com/rusty4kyle/posts/10212353698784975