ಬೆಂಗಳೂರು: ಶೌಚಾಲಯದ ಸೀಟ್ ಒಳಗಡೆ ಕಾಳಿಂಗ ಸರ್ಪ ಕಂಡು ಮನೆ ಮಾಲೀಕ ಕಕ್ಕಾಬಿಕ್ಕಿಯಾಗಿದ್ದು, ತಕ್ಷಣ ಬಿಬಿಎಂಪಿಯ ಉರಗ ತಜ್ಞರಿಗೆ ಕರೆ ಮಾಡಿ ವಿಷಯ ತಿಳಿಸಿ, ಹಾವನ್ನು ರಕ್ಷಿಸಲಾಗಿದೆ.
ಜೂನ್ 9ರಂದು ಬೆಳಗ್ಗೆ ಶೌಚಾಲಯಕ್ಕೆ ತೆರಳಿದಾಗ ಸುಮಾರು 5 ಅಡಿ ಉದ್ದದ ಕಾಳಿಂಗ ಸರ್ಪ ಶೌಚಾಲಯದ ಶೀಟ್‍ನ ಬೌಲ್ ಒಳಗಡೆ ಸುತ್ತಿಕೊಂಡಿರುವುದು ಕಂಡಿದೆ. ಹಾವು ಕಂಡ ಜೆಪಿ ನಗರ 7ನೇ ಹಂತದ ನಿವಾಸಿ ಪ್ರಮೋದ್ ಕುಮಾರ್ ಗಾಬರಿಯಾಗಿದ್ದು, ತಕ್ಷಣವೇ ಬಿಬಿಎಂಪಿಯ ಉರಗ ತಜ್ಞರ ಸ್ವಯಂ ಸೇವಕ ತಂಡಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಉರಗ ತಜ್ಞ ರಾಜೇಶ್ ಕುಮಾರ್ ಕಾಳಿಂಗವನ್ನು ರಕ್ಷಿಸಿದ್ದಾರೆ.
Advertisement
Advertisement
ಬಿಬಿಎಂಪಿ ಉರಗ ತಜ್ಞರಿಗೆ ಕರೆ ಮಾಡುವುದಕ್ಕೂ ಮೊದಲು ಪ್ರಮೋದ್ ಕುಮಾರ್ ಅವರು ವಿವಿಧ ಸಲಕರಣೆಗಳ ಮೂಲಕ ಕಾಳಿಂಗ ಸರ್ಪವನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ, ಹೊರತೆಗೆಯಲು ಸಾಧ್ಯವಾಗದ್ದರಿಂದ ಬಿಬಿಎಂಪಿಯ ಉರಗ ತಜ್ಞರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
https://www.facebook.com/InTheKnowPresentsAOL/videos/2369515699989782/?v=2369515699989782
Advertisement
ರಕ್ಷಿಸಲಾದ ಕಾಳಿಂಗವನ್ನು ಉರಗ ತಜ್ಞರು ವನ್ಯ ಜೀವಿಗಳ ತಾಣಕ್ಕೆ ಬಿಟ್ಟಿದ್ದಾರೆ. ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪಗಳು ಭೇಟೆ ಸಿಗದ ಕಾರಣ ಕಚ್ಚಿ ವಿಷವನ್ನು ಹೊರಸೂಸುವ ಮೂಲಕ ತಮ್ಮ ಆಕ್ರೋಶವನ್ನು ತೀರಿಸಿಕೊಳ್ಳುತ್ತವೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]