ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್‌ನ ಇಲಿನಾಯ್ಸ್‌ನಲ್ಲಿರುವ ವ್ಯಕ್ತಿಯೊಬ್ಬನ ಮನೆಯ ಬಾತ್‌ರೂಮ್ ಗೋಡೆಯಲ್ಲಿ 60 ವರ್ಷದ ಹಿಂದೆ ಮಾಡಿದ್ದ ಮೆಕ್‍ಡೊನಾಲ್ಡ್ಸ್ ಊಟ ಸಿಕ್ಕಿದೆ. ಈ ಕುರಿತು ಆತ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.
ಇಲಿನಾಯ್ಸ್‌ನಲ್ಲಿರುವ ವ್ಯಕ್ತಿಯೊಬ್ಬರ ಮನೆಯನ್ನು ನವೀಕರಣ ಮಾಡುವ ವೇಳೆ ಬಾತ್‌ರೂಮ್ ಗೋಡೆಯಲ್ಲಿ 60 ವರ್ಷ ಮೆಕ್‍ಡೊನಾಲ್ಡ್ಸ್ ಊಟ ಸಿಕ್ಕಿದೆ. ಇದನ್ನು ನೋಡಿ ಅಚ್ಚರಿಗೊಂಡ ಆ ವ್ಯಕ್ತಿ ರೆಡ್ಡಿಟ್‍ನಲ್ಲಿ ಅದರ ಬಗ್ಗೆ ಪೋಸ್ಟ್ ಮಾಡಿದ್ದಾನೆ. ಅಲ್ಲಿ ಅವರು ಫಾಸ್ಟ್ ಫುಡ್‍ನ ವಾಸನೆಯು ತನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 118 ವರ್ಷದ ಸನ್ಯಾಸಿನಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ
Advertisement
Advertisement
ಏನಿದು?
ರಾಬ್ ಎಂದು ಗುರುತಿಸಲಾದ ವ್ಯಕ್ತಿಯ ಮನೆಯನ್ನು ನವೀಕರಣಗೊಳ್ಳಿಸಲಾಗುತ್ತಿತ್ತು. ಈ ವೇಳೆ ಬಾತ್‌ರೂಮ್ ಗೋಡೆಯಲ್ಲಿ ಹಳೆಯ ಚಿಂದಿ ಪೇಪರ್ ಮತ್ತು ಬಟ್ಟೆಯಲ್ಲಿ ಸುತ್ತಿದ್ದ ಫ್ರೆಂಚ್ ಫ್ರೈಗಳ ಪ್ಯಾಕೆಟ್ ಕಂಡುಬಂದಿದೆ. ಇದನ್ನು ಪರಿಶೀಲಿಸಿ ನೋಡಿದಾಗ ಇದು 60 ವರ್ಷದ ಹಳೆ ಊಟ ಎಂಬುದು ತಿಳಿದುಬಂದಿದೆ.
Advertisement
Advertisement
ಈ ಕುರಿತು ರಾಬ್ ಅವರು ಐದು ದಿನಗಳ ಹಿಂದೆ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದು, ಪ್ರಶ್ನೆಗಳ ಸುರಿಮಳೆಯನ್ನು ಕೇಳಿದ್ದಾರೆ. ಈ ಕಾಮೆಂಟ್‍ಗಳಿಗೆ ರಾಬ್ ಕೂಡ ಉತ್ತರಿಸುತ್ತಿದ್ದಾರೆ. ಇದನ್ನೂ ಓದಿ: ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್
ಈ ವೇಳೆ ರಾಬ್, ಕ್ರಿಸ್ಟಲ್ ಲೇಕ್‍ನಲ್ಲಿರುವ ಮೂಲ ಮೆಕ್‍ಡೊನಾಲ್ಡ್ಸ್ ಸ್ಥಳವೊಂದರಲ್ಲಿ ನಮ್ಮ ಕುಟುಂಬ ವಾಸಿಸುತ್ತಿದೆ. ಕುತೂಹಲಕಾರಿಯಾದ ವಿಷಯವೆಂದರೆ 1959ರಲ್ಲಿ ಔಟ್ಲೆಟ್ ಮೊದಲ ಬಾರಿಗೆ ಓಪನ್ ಮಾಡಲಾಯಿತು. ಅದೇ ವರ್ಷ ನಮ್ಮ ಮನೆಯನ್ನು ನಿರ್ಮಿಸಲಾಯಿತು ಎಂದು ಬರೆದುಕೊಂಡಿದ್ದಾರೆ.