ಭುವನೇಶ್ವರ: ಸರ್ಕಾರದ ಪರಿಹಾರದ ಹಣ (Government Compensation Cash) ಪಡೆಯಲು ಬಾಲಸೋರ್ ರೈಲು ದುರಂತದಲ್ಲಿ (Odisha Train Accident) ಪತಿ ಮೃತಪಟ್ಟಿದ್ದಾನೆ ಎಂದು ಮಹಿಳೆಯೊಬ್ಬಳು ಕತೆಕಟ್ಟಿದ ಪ್ರಕರಣ ಒಡಿಶಾದ (Odisha) ಕಟಕ್‍ನಲ್ಲಿ ನಡೆದಿದೆ.
ಇದೀಗ ಕತೆಕಟ್ಟಿದ ಪತ್ನಿಯ ವಿರುದ್ಧ ಪತಿ ಬಹನಾಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಅಲ್ಲದೇ ಪರಿಹಾರದ ಹಣ ಪಡೆಯಲು ಈ ರೀತಿ ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಸಾರ್ವಜನಿಕರ ಹಣವನ್ನು ದೋಚಲು ಯತ್ನಿಸಿದ ಗೀತಾಂಜಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತಿ ಒತ್ತಾಯಿಸಿದ್ದಾನೆ. ಈಗ ಬಂಧನದ ಭೀತಿಯಿಂದ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಜಾರ್ಖಂಡ್‍ನಲ್ಲಿ ತಪ್ಪಿತ್ತು ರೈಲು ದುರಂತ!
Advertisement
ಗೀತಾಂಜಲಿ ದತ್ತಾ ಎಂಬಾಕೆ ರೈಲು ಅಪಘಾತದಲ್ಲಿ ತನ್ನ ಪತಿ ಬಿಜಯ್ ದತ್ತಾ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಳು. ಅಲ್ಲದೆ ಮೃತದೇಹವೊಂದನ್ನು ತನ್ನ ಗಂಡನದ್ದೇ ಎಂದು ಗುರುತಿಸಿದ್ದಳು. ಆದರೆ ದಾಖಲೆಗಳ ಪರಿಶೀಲನೆಯ ನಂತರ ಆಕೆ ಹೇಳುತ್ತಿರುವುದು ಸುಳ್ಳು ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು.
Advertisement
Advertisement
ಈ ಪ್ರಕರಣದ ಬಳಿಕ ರೈಲ್ವೇ ಇಲಾಖೆ, ಮೃತದೇಹಗಳ ನಕಲಿ ವಾರಸುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಪ್ರಕರಣದ ಪತಿ ಹಾಗೂ ಪತ್ನಿ ಕಳೆದ 13 ವರ್ಷಗಳಿಂದ ಬೇರೆಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು (Coromandel Express) ಜೂನ್ 2ರ ಸಂಜೆ ಸರಕುಗಳ ರೈಲಿಗೆ ಡಿಕ್ಕಿ ಹೊಡೆದು ಅದರ ಹೆಚ್ಚಿನ ಕೋಚ್‍ಗಳು ಹಳಿತಪ್ಪಿದ್ದವು. ಈ ಅಪಘಾತದಲ್ಲಿ ಸುಮಾರು 276 ಜನರು ಸಾವನ್ನಪ್ಪಿದ್ದರು. ಅಲ್ಲದೇ 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು (Narendra Modi) 2 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಅಲ್ಲದೆ ಅಪಘಾತದ ಸಂತ್ರಸ್ಥರ ಕುಟುಂಬಗಳಿಗೆ ರೈಲ್ವೆ ಸಚಿವಾಲಯ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದನ್ನೂ ಓದಿ: ಜೈಲಿನಲ್ಲಿರೋ ಸಿಸೋಡಿಯಾ ನೆನೆದು ಕಣ್ಣೀರಾಕಿದ ಸಿಎಂ ಕೇಜ್ರಿವಾಲ್