ಭೋಪಾಲ್: ವಿವಾಹಿತೆಯೊಂದಿಗೆ ಓಡಿಹೋಗಿದ್ದ ಯುವಕ ಮತ್ತು ಆತನಿಗೆ ಸಹಾಯ ಮಾಡಿದ್ದಾರೆಂದು ಆರೋಪಿ ಸಹೋದರಿಯರಿಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಮುಕೇಶ್ ಮೂವರನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾನೆ. ಅಪ್ರಾಪ್ತೆ ಸೇರಿದಂತೆ ಇಬ್ಬರು ಸಹೋದರಿಯರು ವಿವಾಹಿತೆಯೊಂದಿಗೆ ಓಡಿಹೋಗಲು ತಮ್ಮ ಸಹೋದರನಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅವರಿಬ್ಬರಿಗೂ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಳಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿಯ ಪತ್ನಿಯು ಯುವಕನ ಓಡಿ ಹೋಗಿದ್ದಳು. ಈ ಬಗ್ಗೆ ತಿಳಿದು ಮುಕೇಶ್ ಮಾತನಾಡಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ ಎಂದು ಹೇಳಿ ಮೂವರನ್ನು ಧಾರ್ ಜಿಲ್ಲೆಯ ಅರ್ಜುನ್ ಕಾಲೋನಿಯಲ್ಲಿರುವ ತಮ್ಮ ಮನೆಗೆ ಕರೆದಿದ್ದಾನೆ. ಅದರಂತೆಯೇ ಯುವಕ ಮತ್ತು ಆತನ ಸಂಬಂಧಿ ಸಹೋದರಿಯರಿಬ್ಬರು ಬಂದಿದ್ದಾರೆ. ಆದರೆ ಅವರು ಬರುತ್ತಿದ್ದಂತೆ ಮೂವರನ್ನು ಒಂದು ಮರಕ್ಕೆ ಕಟ್ಟಿ ಮನಸೋ ಇಚ್ಛೆ ಬಂದಂತೆ ಥಳಿಸಿದ್ದಾನೆ. ಅಷ್ಟೇ ಅಲ್ಲದೇ ಇಬ್ಬರು ಸಹೋದರಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಎಸ್‍ಪಿ ಸಂಜೀವ್ ಮೂಲೆ ತಿಳಿಸಿದ್ದಾರೆ.
ಮೂವರನ್ನು ಕಟ್ಟಿ ಹಾಕಿ ಹಲ್ಲೆ ಮಾಡುತ್ತಿದ್ದರೂ ಸ್ಥಳೀಯರು ಸುಮ್ಮನೆ ನೋಡುತ್ತಾ ನಿಂತಿದ್ದರು. ಆದರೆ ಯಾರೊಬ್ಬರು ನಿಲ್ಲಿಸುವ ಪ್ರಯತ್ನ ಮಾಡಲಿಲ್ಲ. ಅವರಲ್ಲೊಬ್ಬ ಇದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಆ ವಿಡಿಯೋ ವೈರಲ್ ಆದ ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.
Dhar: A man & his two relatives including a minor were tied to a tree & beaten up in Arjun Colony after he allegedly eloped with a married woman, on May 14. Sanjeev Mule, CSP,"Case registered. We have arrested 5 accused,others will be nabbed soon." #MadhyaPradesh pic.twitter.com/Y8kwRmLlf5
— ANI (@ANI) May 16, 2019
ಈ ಪ್ರಕರಣದಲ್ಲಿ ಆರೋಪಿ ಮುಕೇಶ್ ಜೊತೆ ಅವರ ಕುಟುಂಬದವರು ಭಾಗಿಯಾಗಿದ್ದಾರೆ. ಸದ್ಯಕ್ಕೆ ಹಲ್ಲೆಗೊಳಗಾದವರೂ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಕೇಶ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಈ ಸಂಬಂಧ ಪೋಕ್ಸ್ ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.