ನವದೆಹಲಿ: ವ್ಯಕ್ತಿಯೊಬ್ಬರು ತಾನು ಪ್ರೀತಿಸಿದ ಯುವತಿಯನ್ನ ವೇಶ್ಯಾಗೃಹದಿಂದ ಪಾರು ಮಾಡಿ ಈಗ ಮದುವೆಗೆ ಅಣಿಯಾಗುತ್ತಿರೋ ಅಪರೂಪದ ಲವ್ ಸ್ಟೋರಿ ಇದು.
ಗುರುವಾರದಂದು ದೆಹಲಿ ಮಹಿಳಾ ಆಯೋಗ 27 ವರ್ಷ ವಯಸ್ಸಿನ ನೇಪಾಳ ಮೂಲದ ಯುವತಿಯನ್ನ ಇಲ್ಲಿನ ಜಿಬಿ ರೋಡ್ನ ವೇಶ್ಯಾಗೃಹದಿಂದ ರಕ್ಷಿಸಿದೆ. ಯುವತಿ ಸದರ್ ಬಜಾರ್ನ ತನ್ನ ಪ್ರೇಮಿಯನ್ನ ಮದುವೆಯಾಗಲಿದ್ದಾರೆ.
Advertisement
ಎರಡು ವರ್ಷಗಳ ಹಿಂದೆ ಶುಭಿ ಮತ್ತು ಸಾಗರ್ಗೆ (ಹೆಸರು ಬದಲಾಯಿಸಲಾಗಿದೆ) ದೆಹಲಿಯ ಸ್ಥಳೀಯ ಮಾರುಕಟ್ಟೆಯೊಂದರಲ್ಲಿ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ಒಬ್ಬರನ್ನೊಬ್ಬರು ಇಷ್ಟಪಡೋಕೆ ಶುರು ಮಾಡಿದ್ರು. ನಂತರ ಸಾಗರ್ ಶುಭಿಯನ್ನು ಭೇಟಿಯಾಗಲು ಗ್ರಾಹಕನಂತೆ ವೇಶ್ಯಾಗೃಹಕ್ಕೆ ಆಗಾಗ ಹೋಗ್ತಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮವಾಗಿ ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕು ಅಂತ ನಿರ್ಧರಿಸಿದ್ರು.
Advertisement
ಶುಭಿ ವೇಶ್ಯಾಗೃಹದಲ್ಲಿದ್ದ ಇತರೆ ಕೆಲವು ಮಹಿಳೆಯರೊಂದಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ಹೇಗಾದ್ರೂ ಮಾಡಿ ಪರಾರಿಯಾಗಬೇಕು ಎಂದು ಸಾಕಷ್ಟು ಬಾರಿ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನಂತರ ಸಾಗರ್ ಮಹಿಳಾ ಆಯೋಗದ ಸಹಾಯವಾಣಿಗೆ ಕರೆ ಮಾಡಿ ತನ್ನ ಕಥೆಯನ್ನ ಹೇಳಿಕೊಂಡ್ರು. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಆಯೋಗ, ಪೊಲೀಸರ ಜೊತೆಗೂಡಿ ವೇಶ್ಯಾಗೃಹದ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿದ್ದಾರೆ.
Advertisement
ಮದುವೆಗೆ ಸಿದ್ಧತೆ: ಸಾಗರ್ ಈಗಾಗಲೇ ಮನೆಯವರನ್ನ ಒಪ್ಪಿಸಿದ್ದು, ತಾನು ಪ್ರೀತಿಸಿದ ಶುಭಿಯನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶುಭಿ ಹೊಸ ಜೀವನ ಪ್ರಾರಂಭಿಸಬೇಕೆಂದಿದ್ದು, ಆಕೆಯ ಹಿಂದಿನ ಜೀವನದಿಂದಾಗ ಯಾರೂ ಆಕೆಗೆ ತೊಂದರೆ ಕೊಡದಂತೆ, ಆಕೆಯ ಮರ್ಯಾದೆಗೆ ಹಾನಿ ಮಾಡದಂತೆ ಸ್ಥಳೀಯ ಪೊಲೀಸರು ರಕ್ಷಣೆ ನೀಡಲಿದ್ದಾರೆ ಎಂದು ಮಹಿಳಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
Advertisement
ಕೆಲವು ದಿನಗಳ ಹಿಂದೆ ನಮಗೆ ವ್ಯಕ್ತಿಯೊಬ್ಬರಿಂದ ಕರೆ ಬಂತು. ಜಿಬಿ ರೋಡ್ನಲ್ಲಿನ ಯುವತಿಯೊಬ್ಬರನ್ನ ಪ್ರೀತಿಸುತ್ತಿರುವ ಬಗ್ಗೆ ಹೇಳಿದ್ರು. ಇಲ್ಲಿನ ವೇಶ್ಯಾಗೃಹದಲ್ಲಿ ಯುವತಿ ಇದ್ದು, ಈ ವೃತ್ತಿಯನ್ನ ತ್ಯಜಿಸಿ ತನ್ನೊಂದಿಗೆ ಬರಬೇಕೆಂದಿದ್ದಾರೆ ಎಂದು ಹೇಳಿದ್ರು ಅಂತ ಮಹಿಳಾ ಆಯೋಗದ ಹಿರಿಯ ಅಧಿಕರಿಯೊಬ್ಬರು ಹೇಳಿದ್ದಾರೆ.
2015ರಲ್ಲಿ ನೇಪಾಳದಲ್ಲಿ ಭೂಕಂಪವಾದಾಗ ಈ ಯುವತಿ ಭಾರತಕ್ಕೆ ಬಂದ್ರು. ಆಕೆ ತೀರಾ ಬಡ ಕುಟುಂಬದವರಾಗಿದ್ದು, ಎಲ್ಲವನ್ನೂ ಕಳೆದುಕೊಂಡಿದ್ರು. ತಿನ್ನಲು ಅನ್ನವಿಲ್ಲದೆ, ಜೀವನಾಧಾರವಿಲ್ಲದೆ ದೆಹಲಿಗೆ ಬಂದಿದ್ರು. ನಂತರ ಆಕೆಯನ್ನು ಯಾರೋ ಜಿಬಿ ರೋಡ್ನ ವೇಶ್ಯಾಗೃಹಕ್ಕೆ ಮಾರಿದ್ರು ಎಂದು ಅಧಿಕಾರಿ ಹೇಳಿದ್ದಾರೆ.
ಜಿಬಿ ರೋಡ್: (ಗಾಸ್ರ್ಟಿನ್ ಬ್ಯಾಸ್ಟಿಯನ್ ರೋಡ್) ರಾಷ್ಟ್ರರಾಜಧಾನಿಯ ದೊಡ್ಡ ರೆಡ್ ಲೈಟ್ ಏರಿಯಾ. ಇಲ್ಲಿ ಸುಮಾರು 93 ವೇಶ್ಯಾಗೃಹಗಳಿದ್ದು, 3500 ಸೆಕ್ಸ್ ವರ್ಕರ್ಸ್ ಇದ್ದಾರೆ. ಸೆಕ್ಸ್ ವರ್ಕರ್ ಗಳ ಸುಮಾರು 8 ಸಾವಿರ ಮಕ್ಕಳು ಇಲ್ಲಿ ವಾಸವಿದ್ದು, ಎನ್ಜಿಓಗಳು ಇವರ ವಿದ್ಯಾಭ್ಯಾಸಕ್ಕೆ ಸಹಾಯ ಮಡುತ್ತಿವೆ. ಸಿಕ್ಕಿಂ, ನೇಪಾಳ, ಒಡಿಶಾ, ಅಸ್ಸಾಂ, ಜರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಹುಡುಗಿಯರೇ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಹುಡುಗಿಯರು ಸಂಕಷ್ಟದಲ್ಲಿದ್ರೆ ಅದನ್ನೇ ಬಂಡವಾಳ ಮಾಡಿಕೊಂಡು ಜಿಬಿ ರೋಡ್ನಂತಹ ನರಕಕ್ಕೆ ತಳ್ತಾರೆ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಜಿಬಿ ರೋಡ್ ಬೇಗನೆ ಬಂದ್ ಮಾಡಬೇಕು ಎಂದು ಮಹಿಳಾ ಆಯೋಗದ ಅಧಿಕಾರಿ ಸ್ವಾತಿ ಮಲಿವಾಲ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.